ಮನೆ ಅಪರಾಧ ಬಿಎಂಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸಾವು

ಬಿಎಂಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸಾವು

0

ಬೆಂಗಳೂರು(Bengaluru): ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸುಮನಹಳ್ಳಿ ಡಿಪೋ ಬಳಿ ನಿನ್ನೆ ರಾತ್ರಿ ನಡೆದಿದೆ.

ಸುಮನಹಳ್ಳಿಯಿಂದ ಲಗ್ಗೆರೆ ರಸ್ತೆ ಮಾರ್ಗವಾಗಿ ಬೈಕ್ ಸವಾರ ಪ್ರಮೋದ್ (24) ಆಗಮಿಸುತ್ತಿದ್ದಾಗ ಹಂಪ್ ಇದ್ದ ಕಾರಣ ನಿಧಾನವಾಗಿ ಸಾಗಿದ್ದಾರೆ.

ಈ ವೇಳೆ ಹಿಂಬದಿಯಿಂದ ಬಂದ ಬಸ್, ಬೈಕ್​ಗೆ ಗುದ್ದಿ ಸವಾರನ ಮೇಲೆ ಸಂಚರಿಸಿದೆ.

ಯಶವಂತಪುರದಿಂದ ಬನಶಂಕರಿಗೆ ಸಂಚರಿಸುವ ಬಿಎಂಟಿಸಿ ಬಸ್ ಇದಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ಸಾರ್ವಜನಿಕರು ಬಸ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳಕ್ಕೆ ಕಾಮಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಚಾಲಕನನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.