ಮನೆ ಉದ್ಯೋಗ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿದೆ ಉದ್ಯೋಗವಕಾಶ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿದೆ ಉದ್ಯೋಗವಕಾಶ

0

ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಖಾಲಿ ಇರುವ 2 ಪ್ರಾಜೆಕ್ಟ್ ಅಸಿಸ್ಟೆಂಟ್ & ಪ್ರಾಜೆಕ್ಟ್ ಅಸೋಸಿಯೇಟ್-1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ನವೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.

ಹುದ್ದೆಯ ಮಾಹಿತಿ:

ಪ್ರಾಜೆಕ್ಟ್ ಅಸಿಸ್ಟೆಂಟ್: 1

ಪ್ರಾಜೆಕ್ಟ್ ಅಸೋಸಿಯೇಟ್-1 : 1

ವಿದ್ಯಾರ್ಹತೆ:

ಪ್ರಾಜೆಕ್ಟ್ ಅಸಿಸ್ಟೆಂಟ್: ಎಂಜಿನಿಯರಿಂಗ್ & ಟೆಕ್ನಾಲಜಿಯಲ್ಲಿ ಡಿಪ್ಲೊಮಾ, ಬಿಎಸ್ಸಿ

ಪ್ರಾಜೆಕ್ಟ್ ಅಸೋಸಿಯೇಟ್-1 : ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಪದವಿ, ನ್ಯಾಚುರಲ್/ ಅಗ್ರಿಕಲ್ಚರಲ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ, ಎಂವಿಎಸ್ಸಿ

ವಯೋಮಿತಿ:

ಪ್ರಾಜೆಕ್ಟ್ ಅಸಿಸ್ಟೆಂಟ್: ಗರಿಷ್ಠ 50 ವರ್ಷ

ಪ್ರಾಜೆಕ್ಟ್ ಅಸೋಸಿಯೇಟ್-1 : ಗರಿಷ್ಠ 35 ವರ್ಷ

ವಯೋಮಿತಿ ಸಡಿಲಿಕೆ:

ಭಾರತೀಯ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ವೇತನ:

ಪ್ರಾಜೆಕ್ಟ್ ಅಸಿಸ್ಟೆಂಟ್: ಮಾಸಿಕ ₹ 20,000

ಪ್ರಾಜೆಕ್ಟ್ ಅಸೋಸಿಯೇಟ್-1 : ಮಾಸಿಕ ₹ 31,000

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ pbanerjee@iisc.ac.in ಗೆ ನವೆಂಬರ್ 30, 2022ಕ್ಕೆ ಮುನ್ನ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 05/11/2022

ಇ-ಮೇಲ್ ಕಳುಹಿಸಲು ಕೊನೆ ದಿನ: 30/11/2022