ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಬೆಂಗಳೂರು(Bengaluru): ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ದ ಆಡಳಿತ ಪಕ್ಷದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾನೊಬ್ಬ ದಲಿತ ಶಾಸಕ ಎಂಬ ಕಾರಣದಿಂದ ಮೊನ್ನೆ ನನ್ನ ಕ್ಷೇತ್ರದಲ್ಲಿ ನಡೆದ ಘಟನೆ ಸಂಬಂಧ ಸೌಜನ್ಯಕ್ಕೂ ಮಾತನಾಡಿಸಿ ವಿಷಾಧ ವ್ಯಕ್ತಪಡಿಸಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಯ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬದವರನ್ನು ನೋಡಿ ಮಾತನಾಡಿಸಲು ಸಾಂತ್ವಾನ ಹೇಳಲು ತೆರಳಿದ್ದೆ. ಇದು ಸಣ್ಣ ಘಟನೆ ಅಲ್ಲ ಜನರು ನನಗೆ ದೊಣ್ಣೆಯಿಂದ ಹೊಡೆಯಲು ಬಂದಿದ್ದರು. ಕಲ್ಲಲ್ಲಿ ಹೊಡೆಯಲು ಬಂದಿದ್ರು, ದೊಣ್ಣೆಯಲ್ಲಿ ಹೊಡೆಯಲು ಬಂದಿದ್ರು, ಇದೊಂದು ಸಣ್ಣ ಘಟನೆ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ
ನಾನು ದೂರು ಕೊಡಲಿಲ್ಲ. ನಾನು ಕುಮಾರಸ್ವಾಮಿ ಅಲ್ಲ.ನಾನೊಬ್ಬ ಶಾಸಕ ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇದುವರೆಗೂ ನನ್ನ ಮಾತನಾಡಿಸುವ ಕೆಲಸ ಮಾಡಿಲ್ಲ. ಸೌಜನ್ಯಕ್ಕೂ ಕರೆದು ಏನಾಯ್ತು ಅಂತ ಕೇಳಿಲ್ಲ ಜನಪ್ರತಿನಿಧಿಗಳಿಗೆ ಹೀಗೆ ಆದರೆ ಜನರ ಪರಿಸ್ಥಿತಿ ಎಲ್ಲಿಗೆ ಹೋಗಲಿದೆ ಎಂದರು.
ನಾನು ಆನೆ ಸಾಕಲು ಆಗುತ್ತಾ ಗೃಹ ಸಚಿವರು ಸಂಪೂರ್ಣವಾಗಿ ನನ್ನ ನಿರ್ಲಕ್ಷ್ಯ ಮಾಡಿದ್ದಾರೆ.ಇದುವರೆಗೂ ಒಂದ್ ಪೋನ್ ಮಾಡಿ ಏನಾಯ್ತು ಅಂತ ಕೇಳಿಲ್ಲ ಎಂದು ನೇರವಾಗಿ ಗೃಹ ಸಚಿವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಆರೋಗ್ಯದ ಬಗ್ಗೆ ಪೋನ್ ಮಾಡಿ ವಿಚಾರಿಸಿದ್ದಾರೆ. ನಾವು ಹಲ್ಲೆಗೆ ಒಳಪಡುವರು ಅಂತ ಗೃಹ ಸಚಿವರು ಸುಮ್ಮನೆ ಆಗಿರಬಹುದು ಎಂದರು.
ನನಗೆ ಬಹಳ ತೊಂದರೆ ಆಗಿದೆ, ಕೊಲೆ ಮಾಡಲು ಬಂದವರು, ಹುಚ್ಚು ನಾಯಿ ಅಟ್ಟಿಸಿಕೊಂಡು ಬಂದ ರೀತಿಯಲ್ಲಿ ಜನ ನನ್ನ ಅಟ್ಟಿಸಿಕೊಂಡು ಬಂದರು. ನಾನು ಅಂದು ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು.ಬಟ್ಟೆ ಹೋದ್ರೆ ಹೋಯ್ತ, ಪ್ರಾಣ ಹೋದ್ರೆ ಏನು ಗತಿ ಎಂದರು..
ಸಿ.ಟಿ ರವಿ ಹಾಗೂ ಯಡಿಯೂರಪ್ಪ ಅವರು ತಾಳ್ಮೆಯಿಂದ ಇರುವಂತೆ ಹೇಳಿದ್ದಾರೆ. ನನ್ನ ವಿಚಾರದಲ್ಲಿ ಗೃಹ ಸಚಿವರು ಸರಿಯಾಗಿ ನಡೆದುಕೊಂಡಿಲ್ಲ. ಆನೆ ದಾಳಿ ನಡೆದೇ ನಡೆಯುತ್ತೆ, ಇನ್ನೂ ಆನೆ ದಾಳಿ ತಪ್ಪಲ್ಲ, ಕ್ಷೇತ್ರದಲ್ಲಿ ಏನಾದರೂ ಆದರೆ ಶಾಸಕರು ಸಾಂತ್ವನ ಹೇಳೋಕೆ ಹೋಗಬಾರದಾ ? ಎಂದು ಪ್ರಶ್ನಿಸಿದರು.