Saval TV on YouTube
ವಿಜಯಪುರ(Vijayapura): ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ವ್ಯಾಪಾರ ಮಾಡಲು ಟ್ರೇಡಿಂಗ್ ಲೈಸೆನ್ಸ್ ನೀಡಲು ಲಂಚ ತೆಗೆದುಕೊಳ್ಳುತ್ತಿದ್ದ ವಿಜಯಪುರ ಎಪಿಎಂಸಿ ಆಂತರಿಕ ಲೆಕ್ಕಪರಿಶೋಧಕ ಶಂಕರಯ್ಯ ಹಿರೇಮಠ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಟ್ರೇಡಿಂಗ್ ಲೈಸೆನ್ಸ್ ನೀಡಲು ₹ 5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿ ವ್ಯಾಪಾರಿಯಿಂದ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಲಂಚದ ಹಣದ ಸಮೇತ ಎಪಿಎಂಸಿ ಆಂತರಿಕ ಲೆಕ್ಕ ಪರಿಶೋಧಕ ಸಿಕ್ಕಿಬಿದ್ದಿದ್ದಾರೆ.
ಕಚೇರಿಯಲ್ಲಿ ತಪಾಸಣೆ ವೇಳೆ ಆರೋಪಿಯ ಬಳಿ ಹೆಚ್ಚುವರಿಯಾಗಿ ₹ 39 ಸಾವಿರ ಹಣ ಪತ್ತೆಯಾಗಿದೆ ಎಂದು ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ತಿಳಿಸಿದ್ದಾರೆ.