ಮನೆ ಉದ್ಯೋಗ ಭಾರತೀಯ ಮಸಾಲೆ ಮಂಡಳಿಯಲ್ಲಿ ರಿಸರ್ಚ್ ಟ್ರೇನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ಮಸಾಲೆ ಮಂಡಳಿಯಲ್ಲಿ ರಿಸರ್ಚ್ ಟ್ರೇನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಭಾರತೀಯ ಮಸಾಲೆ ಮಂಡಳಿಯಲ್ಲಿ 20 ರಿಸರ್ಚ್ ಟ್ರೇನಿ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಇಡುಕ್ಕಿ, ಸಕಲೇಶಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇದೇ ಡಿಸೆಂಬರ್ 7ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ.

ಹುದ್ದೆಯ ಮಾಹಿತಿ:

ರಿಸರ್ಚ್ ಟ್ರೇನಿ (ಇಡುಕ್ಕಿ)-13

ರಿಸರ್ಚ್ ಟ್ರೇನಿ(ಸಕಲೇಶಪುರ)-3

ರಿಸರ್ಚ್ ಟ್ರೇನಿ(ಗ್ಯಾಂಗ್ಟಾಕ್)-4

ಶೈಕ್ಷಣಿಕ ಅರ್ಹತೆ:

ಭಾರತೀಯ ಮಸಾಲೆ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಎಸ್ಸಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಭಾರತೀಯ ಮಸಾಲೆ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 30 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ:

ಶೈಕ್ಷಣಿಕ ಅರ್ಹತೆ

ಲಿಖಿತ ಪರೀಕ್ಷೆ

ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ, ರೆಸ್ಯೂಮ್ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 7ರಂದು ಬೆಳಗ್ಗೆ 10 ಗಂಟೆಗೆ ಈ ಕೆಳಕಂಡ ಸ್ಥಳದಲ್ಲಿ ಹಾಜರಿರಬೇಕು.

ರಿಸರ್ಚ್ ಟ್ರೇನಿ (ಇಡುಕ್ಕಿ)-ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆ ಮಸಾಲೆ ಮಂಡಳಿ, ಕೈಲಾಸನಾಡು P.O., ಮೈಲಡುಂಪಾರ, ಇಡುಕ್ಕಿ, ಕೇರಳ – 685553

ರಿಸರ್ಚ್ ಟ್ರೇನಿ(ಸಕಲೇಶಪುರ)- ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಸಂಶೋಧನಾ ಕೇಂದ್ರ ಸಾಂಬಾರ ಮಂಡಳಿ ಡೊನಿಗಲ್ ಪಿ.ಒ., ಸಕಲೇಶಪುರ, ಕರ್ನಾಟಕ – 573134

ರಿಸರ್ಚ್ ಟ್ರೇನಿ(ಗ್ಯಾಂಗ್ಟಾಕ್)-ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಸಂಶೋಧನಾ ಕೇಂದ್ರ, ಮಸಾಲೆ ಮಂಡಳಿ, ತಾಡಾಂಗ್ ಗ್ಯಾಂಗ್ಟಾಕ್, ಸಿಕ್ಕಿಂ – 737102

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 23/11/2022

ಸಂದರ್ಶನ ನಡೆಯುವ ದಿನಾಂಕ: 07/12/2022

ಹೆಚ್ಚಿನ ವಿವರಗಳಿಗಾಗಿ,

ಇಡುಕ್ಕಿ ಸ್ಥಳಕ್ಕಾಗಿ ಸಂಪರ್ಕ ದೂರವಾಣಿ ಸಂಖ್ಯೆ: 04868-237268, 237206, 237207,

ಸಕಲೇಶಪುರ ಸ್ಥಳಕ್ಕೆ ದೂರವಾಣಿ ಸಂಖ್ಯೆ: 08173-244281, 8547138279

ಗ್ಯಾಂಗ್ಟಾಕ್ ಸ್ಥಳಕ್ಕಾಗಿ ದೂರವಾಣಿ ಸಂಖ್ಯೆ: 03592-231307 ಸಂಪರ್ಕಿಸಿ.