ಮನೆ ಅಪರಾಧ ಖಾಸಗಿ ಬಸ್- ಕಾರು ನಡುವೆ ಡಿಕ್ಕಿ: ಒಂದೇ ಕುಟುಂಬದ ಮೂವರು ಸಾವು

ಖಾಸಗಿ ಬಸ್- ಕಾರು ನಡುವೆ ಡಿಕ್ಕಿ: ಒಂದೇ ಕುಟುಂಬದ ಮೂವರು ಸಾವು

0

ಕಾರ್ಕಳ: ಖಾಸಗಿ ಬಸ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ್ದು, ಗಂಡ ಹೆಂಡತಿ ಮಗು ಸಹಿತ ಮೂರು ಮಂದಿ ಸ್ಥಳದಲ್ಲೇ  ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಸಮೀಪದ ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಮೈನೇರು ಪ್ರದೇಶದಲ್ಲಿ ನಡೆದಿದೆ.

ಬೆಂಗಳೂರು ಮೂಲದ ದಂಪತಿ ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಬೆಳ್ತಂಗಡಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದಾಗ ಕಾರ್ಕಳದಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು, ಕಾರು ಬಸ್ಸಿನಡಿ ಭಾಗದಲ್ಲಿ ಸಿಕ್ಕಿ ಹಾಕಿಕೊಂಡು ಅಪ್ಪಚ್ಚಿಯಾಗಿ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಬೆಂಗಳೂರು ಮೂಲದವರು ಎನ್ನಲಾಗಿದ್ದು, ದಂಪತಿ ಸಾಧಾರಣ ಮೂವತ್ತರ ಹರೆಯದವರು ಎಂದು ತಿಳಿದು ಬಂದಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ತನಿಖೆ ಆರಂಭಿಸಿದ್ದಾರೆ.