ಪಾಲಯ ಮಾಂ ಪವಮಾನ |
ಪವಮಾನ ಪವಮಾನ ಪವಮಾನಾ…
ಪಾಲಯಮಾಂ ಕರುಣಾಲಯ ಹರಿಪದ
ಕೀಲಾಲಯ ಮಧುಪ ||ಪಾಲಯ||
ಪ್ರಾಣ-ಅಪಾನ ವ್ಯಾನ-ಉದಾನ
ಸಮಾನ ಪೂರ್ಣಜ್ಞಾನ|
ನೀನೊಲಿದೆನ್ನ ಸದಾನುರಾಗದಲಿ
ಮಾಡದೆ ಪೊರೆಯೆನ್ನ ||ಪಾಲಯ||
ಹರಿಸುತ ಹರಪಿತ ಚರಾಚರಸ್ಥಿತ
ಶರಣ ಜನರ ಧಾತ|
ಹರಿಯಾಜ್ಞದಿ ಜೀವರಿಗೆ ತುದಿಯಲಿ
ಅವರವರ ಗತಿ ಪ್ರದಾತ ||ಪಾಲಯ||
ಮುದ್ದು ಅಭಿನವ ಜನಾರ್ಧನ ವಿಠಲನ
ಪಾದಪದ್ಮಯುಗಳ |
ಶುದ್ಧ ಭಕುತಿಯಲಿ ಪೊತ್ತಿ ಸುಖಿಪ ತೆರ
ಉದ್ಧರಿಸುವುದೆನ್ನ ||ಪಾಲಯ||