ಮನೆ ಅಪರಾಧ ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಕೇಸ್ ದಾಖಲು

ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಕೇಸ್ ದಾಖಲು

0

ಮೈಸೂರು(Mysuru): ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಹೊಸ ಕೇಸ್ ದಾಖಲಾಗಿದ್ದು, ದೇವರಾಜ್ ಪೊಲೀಸ್ ಠಾಣೆಯಲ್ಲಿ ಸೋಮವಾರ ರವಿ ಎರಡನೇ ಪತ್ನಿ ದೂರು ನೀಡಿದ್ದಾರೆ.

“ಸೆಪ್ಟೆಂಬರ್ 22, 2022 ರಂದು ನಾನು ಮೈಸೂರಿನ ದೇವರಾಜ ಮಾರ್ಕೆಟ್​’ಗೆ ಹೋಗಿದ್ದೆ. ನನ್ನ ಸ್ಕೂಟರ್ ಡಿಕ್ಕಿಯಲ್ಲಿ ಚೆಕ್ ಬುಕ್ ಇಟ್ಟಿದ್ದೆ. ಸ್ಯಾಂಟ್ರೋ ರವಿ ಮತ್ತು ಪ್ರಕಾಶ್ ಸ್ಕೂಟರ್‌’ಗೆ ಡಿಕ್ಕಿ ಹೊಡೆದು ಚೆಕ್ ಬುಕ್ ಕಳವು ಮಾಡಿದ್ದಾರೆ. ಬಳಿಕ ನನ್ನ ಚೆಕ್ ಬುಕ್ ದುರುಪಯೋಗ ಮಾಡಿಕೊಂಡಿದ್ದಾರೆ. ನಾನು ಸೈನ್ ಮಾಡಿರುವ ಎರಡು ಚೆಕ್​ ಅನ್ನು ಕೆನರಾ ಬ್ಯಾಂಕ್​​ಗೆ ನೀಡಿದ್ದಾರೆ. ಇನ್ನೆರಡು ಚೆಕ್ ಹಾಗೆಯೇ ಇಟ್ಟುಕೊಂಡಿದ್ದಾರೆ‌. ಈ ಸಂಬಂಧ ದೇವರಾಜ ಪೊಲೀಸ್ ಸ್ಟೇಷನ್​​’ನಲ್ಲಿ ಸೆಪ್ಟೆಂಬರ್ 24 ರಂದು ದೂರು ನೀಡಿದ್ದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತೆನೀಡಿದ ದೂರು ಆಧರಿಸಿ ಸ್ಯಾಂಟ್ರೋ ರವಿ ವಿರುದ್ಧ ಐಪಿಸಿ 465, 468, 506, 420 ಹಾಗೂ 34 ಸೆಕ್ಷನ್​ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವರ್ಗಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಿಐಡಿ ಡಿವೈಎಸ್ಪಿ ನೇತೃತ್ವದ ನಾಲ್ವರು ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ. ಪೊಲೀಸ್ ತನಿಖಾಧಿಕಾರಿ ಎಸಿಪಿಯಿಂದ ದಾಖಲಾತಿ ವಶಕ್ಕೆ ಪಡೆದಿದ್ದಾರೆ.