ಮನೆ ರಾಷ್ಟ್ರೀಯ ಜಮ್ಮು ಕಾಶ್ಮೀರದಲ್ಲಿ ಅವಳಿ ಬಾಂಬ್ ಸ್ಫೋಟ: 7 ಜನರಿಗೆ ಗಾಯ

ಜಮ್ಮು ಕಾಶ್ಮೀರದಲ್ಲಿ ಅವಳಿ ಬಾಂಬ್ ಸ್ಫೋಟ: 7 ಜನರಿಗೆ ಗಾಯ

0

ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಿರುವ ಸಂದರ್ಭದಲ್ಲಿಯೇ ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಅವಳಿ ಸ್ಫೋಟ ಸಂಭವಿಸಿದ್ದು, ಕನಿಷ್ಠ7 ಜನರು ಗಾಯಗೊಂಡಿದ್ದಾರೆ.

ಜಮ್ಮುವಿನ ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ ಮುಕೇಶ್ ಸಿಂಗ್ ಮಾತನಾಡಿ, ಸ್ಫೋಟಕ್ಕಾಗಿ ಕಾರುಗಳಲ್ಲಿ ಸುಧಾರಿತ ಸ್ಫೋಟ ಸಾಧನಗಳನ್ನು (ಐಇಡಿ) ಅಳವಡಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬಾತನ ಸ್ಥಿತಿ ಗಂಭೀರವಾಗಿದೆ.

ಸ್ಫೋಟಗಳ ಬಳಿಕ ಇಡೀ ಪ್ರದೇಶದಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪ್ರತಿ ವಾಹನಗಳನ್ನೂ ತಡೆದು ಪರಿಶೀಲಿಸಲಾಗುತ್ತಿದೆ.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ಶನಿವಾರ ವಿರಾಮ ಪಡೆದುಕೊಂಡಿದೆ. ಜಮ್ಮುವಿನಿಂದ ಸುಮಾರು 60 ಕಿಮೀ ದೂರದ ಚಡ್ವಾಲ್’ನಲ್ಲಿ ಯಾತ್ರೆ ತಂಗಿದೆ.