ಬೆಂಗಳೂರು : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಾರ ಭಾರತಿಯಲ್ಲಿ ಬಾನ್ ದನಿ ರೇಡಿಯೋ ವಿಶೇಷ ಕಾರ್ಯಕ್ರಮ ಫೆ. 27ರಿಂದ ಪ್ರಸಾರವಾಗಲಿದೆ.
ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ಧತೆಗಾಗಿ ಬಾನ್ದನಿ ಕಾರ್ಯಕ್ರಮಗಳು ಫೆಬ್ರವರಿ 27 ರಿಂದ ಪ್ರಸಾರಗೊಳ್ಳಲಿದ್ದು, ಈ ಕಾರ್ಯಕ್ರಮಗಳನ್ನು 13 ಆಕಾಶವಾಣಿ ಕೇಂದ್ರಗಳು ಹಾಗೂ 3 ವಿವಿಧ ಭಾರತಿ FM ಕೇಂದ್ರಗಳಿಂದ ಏಕಕಾಲದಲ್ಲಿ ರೇಡಿಯೋ ಅಲ್ಲದೆ, ಸಾಮಾನ್ಯ ಮೊಬೈಲ್, All India Radio Bangalore You Tube Streaming ನಲ್ಲಿ ಮತ್ತು ಜಗತ್ತಿನಾದ್ಯಂತ Prasarabharathi news on air app ನಲ್ಲಿಯೂ ಕೇಳಬಹುದು. ಇದಲ್ಲದೆ All India Radio Bangalore You Tube ನ SSLC 2023 pariksha siddathe play list ನಲ್ಲಿ ಪುನಃ ಕೇಳಿಸಲು ಹಾಗೂ ಅನಿಸಿಕೆ ಹಂಚಿಕೊಳ್ಳಲು ಅವಕಾಶವಿದೆ.
ಕಾರ್ಯಕ್ರಮಗಳನ್ನು ವೇಳಾಪಟ್ಟಿ ಅನ್ವಯ ವಿದ್ಯಾರ್ಥಿಗಳಿಗೆ ಕೇಳಿಸಿ, ಪಾಠಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತಾಗಲು ಹಾಗೂ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉಪನಿರ್ದೇಶಕರು( ಅಭಿವೃದ್ಧಿ) ರವರು ಕೆಳಗಿನಂತೆ ಕ್ರಮ ವಹಿಸುವುದು.
ಗುಣಾತ್ಮಕ ಶಿಕ್ಷಣದ ಗುರಿ ಸಾಧನೆಯೊಂದಿಗೆ ಡಿಜಿಟಲ್ ಉಪಕ್ರಮದ ಅಳವಡಿಕೆ ಹಾಗೂ ತರಗತಿ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಏಕತಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಆಕಾಶವಾಣಿಯ ಮೂಲಕ ಬಾನ್ ದನಿ ಕಾರ್ಯಕ್ರಮದಡಿ ಶಾಲೆಗಳಲ್ಲಿ ರೇಡಿಯೋ ಪಾಠಗಳನ್ನು ಡಿಸೆಂಬರ್-2022ರ ಮಾಹೆಯಿಂದ ಪ್ರಸಾರ ಮಾಡಲಾಗುತ್ತಿದೆ.
ಬಾನ್ ದನಿ ಕಾರ್ಯಕ್ರಮವು 1 ರಿಂದ 9ನೇ ತರಗತಿಗಳಿಗೆ ನೀತಿ ಕತೆ, ಯೋಗ ಮತ್ತು ಆರೋಗ್ಯ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ ಹಾಗೂ ಇಂಗ್ಲಿಷ್ ಕಲಿಕೆಯನ್ನೊಳಗೊಂಡ ಸಾಮಾನ್ಯ ಪಾಠಗಳು ಮತ್ತು 4 ಹಾಗೂ 5 ನೇ ತರಗತಿಗಳಿಗೆ ಕನ್ನಡ ಮತ್ತು ಗಣಿತ ವಿಷಯಗಳ ಕಲಿವಿನ ಫಲ ಆಧಾರಿತ ಪಾಠಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮವು ಆಕಾಶವಾಣಿಯಲ್ಲಿ ಸೋಮವಾರದಿಂದ ಗುರುವಾರದವರೆಗೆ ಮಧ್ಯಾಹ್ನ 2.35 ರಿಂದ 3.00 ಗಂಟೆಯವರೆಗೆ ಪ್ರಸಾರಗೊಳ್ಳಲಿವೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.