ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್, ಮೈಸೂರು ಕಂಪನಿಯಲ್ಲಿ ಅನುಚ್ಛೇದ 371 (ಜೆ) ರಡಿಯಲ್ಲಿ ಮೀಸಲಿರುವ ವಿವಿಧ ಹುದ್ದೆಗಳ ಭರ್ತಿಗೆ ಇದೀಗ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆಸಕ್ತರು ಹುದ್ದೆಗಳ ವಿವರಗಳನ್ನು ಕೆಳಗಿನಂತೆ ತಿಳಿದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಕಂಪನಿಕಾರ್ಯದರ್ಶಿ : 1
ವ್ಯವಸ್ಥಾಪಕರು (ಲೆಕ್ಕಪತ್ರ): 1
ಉಪ-ವ್ಯವಸ್ಥಾಪಕರು (ಮೇಂಟೆನೆನ್ಸ್) : 1
ಸೂಪರ್ ವೈಸರ್ : 1
ಹುದ್ದೆವಾರು ವೇತನ ಶ್ರೇಣಿ
ಕಂಪನಿಕಾರ್ಯದರ್ಶಿ : Rs.56,800-80,100.
ವ್ಯವಸ್ಥಾಪಕರು (ಲೆಕ್ಕಪತ್ರ): Rs.42,000-72,500.
ಉಪ-ವ್ಯವಸ್ಥಾಪಕರು (ಮೇಂಟೆನೆನ್ಸ್) : Rs.26,400-55,350.
ಸೂಪರ್ವೈಸರ್ : Rs.20,400-45,300.
ಮೇಲಿನ ಹುದ್ದೆಗಳಿಗೆ ನಿಗಧಿಪಡಿಸಿರುವ ಶೈಕ್ಷಣಿಕ ಅರ್ಹತೆ, ಅನುಭವ, ಷರತ್ತು-ನಿಬಂಧನೆಗಳನ್ನು ಈ ಕಂಪನಿಯ ಅಧಿಕೃತ ವೆಬ್ಸೈಟ್ ‘www.mysorepaints.karnataka.gov.in’ ನಲ್ಲಿ ಪ್ರಕಟಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ವೆಬ್ಸೈಟ್ ನಲ್ಲಿ ನೀಡಲಾಗಿರುವ ‘ಅರ್ಜಿನಮೂನೆ’ಯನ್ನು ಡೌನ್ಲೋಡ್ ಮಾಡಿಕೊಂಡು, ಸಂಬಂಧಿಸಿದ ಧೃಡೀಕೃತ ದಾಖಲೆಗಳೊಡನೆ ನಿಗದಿತ ಅವಧಿಯೊಳಗೆ ಅಂಚೆಯ ಮೂಲಕ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 13-03-2023
ಸೂಚನೆ
ಕಂಪನಿಯ ವೆಬ್ಸೈಟ್ ನಲ್ಲಿ ಪ್ರತ್ಯೇಕವಾಗಿ ಪ್ರಕಟಿಸಿರುವ ಅಧಿಸೂಚನೆಯನ್ನು ಓದಿ, ಚೆನ್ನಾಗಿ ಅರ್ಥೈಸಿಕೊಂಡು ಮನವರಿಕೆ ಮಾಡಿಕೊಂಡು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಕಲ್ಯಾಣ ಕರ್ನಾಟಕ (ಹೈದೆರಾಬಾದ್ ಕರ್ನಾಟಕ) ವ್ಯಾಪ್ತಿಯ ಜಿಲ್ಲೆಗಳ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆ / ಮಾಹಿತಿಗಳು
ಹೆಸರು
ಮೊಬೈಲ್ ನಂಬರ್
ಇ-ಮೇಲ್ ವಿಳಾಸ
ಶೈಕ್ಷಣಿಕ ಅರ್ಹತೆ ಮಾಹಿತಿ / ದಾಖಲೆಗಳು
ತರಬೇತಿ ದಾಖಲೆಗಳು
ಕಾರ್ಯಾನುಭವ ದಾಖಲೆಗಳು
ಇತರೆ