ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ಮುಂಬೈ ಇಂಡಿಯನ್ಸ್, ತನ್ನ ಐದನೇ ಕ್ರಿಕೆಟ್ ಫ್ರಾಂಚೈಸಿಯಾಗಿ ‘ಎಂಐ ನ್ಯೂಯಾರ್ಕ್’ ತಂಡದ ಮಾಲೀಕತ್ವವನ್ನು ಪಡೆದುಕೊಂಡಿರುವುದಾಗಿ ಸೋಮವಾರ (ಮಾರ್ಚ್ 20) ಘೋಷಿಸಿದೆ. ನ್ಯೂಯಾರ್ಕ್ ಮೂಲದ ಈ ತಂಡದಿಂದ ಎಂಐ ಕುಟುಂಬ ಇನ್ನಷ್ಟು ವಿಸ್ತಾರಗೊಂಡಿದೆ. ಹೊಸ ತಂಡವು ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ (ಎಂಎಲ್ಸಿ 2023) ಆಡಲಿದೆ.
“ವರ್ಷದಿಂದ ವರ್ಷಕ್ಕೆ ದೈತ್ಯ ಸ್ವರೂಪದಲ್ಲಿ ಬೆಳೆಯುತ್ತಿರುವ ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನ್ಯೂಯಾರ್ಕ್ ಫ್ರಾಂಚೈಸಿಯನ್ನು ಸ್ವಾಗತಿಸಲು ನಾನು ಅಪಾರ ಉತ್ಸುಕರಾಗಿದ್ದೇವೆ. ಅಮೆರಿಕದ ಕ್ರಿಕೆಟ್ ಲೀಗ್ಗೆ ಇದೇ ಮೊದಲ ಬಾರಿ ಪ್ರವೇಶ ಪಡೆಯುತ್ತಿದ್ದೇವೆ. ನಿರ್ಭೀತಿ ಮತ್ತು ಮನರಂಜನೆಯ ಕ್ರಿಕೆಟ್ ಆಟದ ಜಾಗತಿಕ ಬ್ರ್ಯಾಂಡ್ ಆಗಿ ಮುಂಬೈ ಇಂಡಿಯನ್ಸ್ ಅನ್ನು ರೂಪಿಸುವ ಭರವಸೆ ನಮ್ಮದು. ಎಂಐಗೆ ಇದು ಇನ್ನೊಂದು ಹೊಸ ಆರಂಭವಾಗಿದೆ ಮತ್ತು ನಾವು ಮುಂದಿನ ಉತ್ಸಾಹಿ ಪ್ರಯಾಣವನ್ನು ಎದುರು ನೋಡುತ್ತಿದ್ದೇವೆ,” ಮುಂಬೈ ಇಂಡಿಯನ್ಸ್ ಮಾಲಕಿ ನೀತಾ ಅಂಬಾನಿ ಹೇಳಿದ್ದಾರೆ.
ಎಂಐ ಕುಟುಂಬವು ಕ್ರಿಕೆಟ್ ಆಟವನ್ನು ಜಗತ್ತಿನೆಲ್ಲೆಡೆ ವಿಸ್ತರಿಸಲು ಮತ್ತು ಉತ್ತೇಜಿಸಲು ಬದ್ಧವಾಗಿದೆ. ಜೊತೆಗೆ ಪ್ರತಿದಿನ ಬಲಿಷ್ಠವಾಗಿ ಬೆಳೆಯುತ್ತಲೇ ಇದೆ. ಎಂಐ ಕುಟುಂಬದಲ್ಲಿ ಮುಂಬೈ ಇಂಡಿಯನ್ಸ್ (ಐಪಿಎಲ್), ಎಂಐ ಕೇಪ್ಟೌನ್ (ಎಸ್ಎ20), ಎಂಐ ಎಮಿರೇಟ್ಸ್ (ಐಎಲ್ಟಿ20) ಮತ್ತು ಮುಂಬೈ ಇಂಡಿಯನ್ಸ್ (ಡಬ್ಲ್ಯುಪಿಎಲ್) ಬಳಿಕ ‘ಎಂಐ ನ್ಯೂಯಾರ್ಕ್’ 5ನೇ ಫ್ರಾಂಚೈಸಿಯಾಗಿ ಸೇರಿಕೊಂಡಿದೆ. ಇದರೊಂದಿಗೆ ಮುಂಬೈ ಫ್ರಾಂಚೈಸಿಯು ಮೂರು ಭಿನ್ನ ಖಂಡಗಳಲ್ಲಿ, ನಾಲ್ಕು ವಿಭಿನ್ನ ದೇಶಗಳಲ್ಲಿ ಮತ್ತು ಐದು ಜನಪ್ರಿಯ ಕ್ರಿಕೆಟ್ ಲೀಗ್ ಗಳಲ್ಲಿ ತಂಡಗಳನ್ನು ಹೊಂದಿದಂತಾಗಿದೆ.
ವಿಶ್ವದ ಎಲ್ಲೆಡೆ ಸುಮಾರು 50 ದಶಲಕ್ಷ ಡಿಜಿಟಲ್ ಅಭಿಮಾನಿಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ಕ್ರಿಕೆಟ್ ಬ್ರ್ಯಾಂಡ್ ಎನಿಸಿದೆ. ವಿಶ್ವದೆಲ್ಲೆಡೆಯ ಪ್ರಮುಖ ಫ್ರಾಂಚೈಸಿ ಲೀಗ್ ಗಳಲ್ಲಿ ವರ್ಷದಲ್ಲಿ ಸರಿಸುಮಾರು 6 ತಿಂಗಳ ಕಾಲ ಕ್ರಿಕೆಟ್ ಆಡುವ ಎಂಐ ಕುಟುಂಬದ ಈ ತಂಡಗಳನ್ನು ಅಭಿಮಾನಿಗಳು ಬೆಂಬಲಿಸುತ್ತ ಮತ್ತು ಹುರಿದುಂಬಿಸುತ್ತ ಬಂದಿದ್ದಾರೆ. 2009ರಿಂದ ಮುಂಬೈ ಇಂಡಿಯನ್ಸ್ ಶೇ. 99ರಷ್ಟು ಬ್ರ್ಯಾಂಡ್ ಮೌಲ್ಯದ (ಬ್ರ್ಯಾಂಡ್ ಫೈನಾನ್ಸ್) ಪ್ರಗತಿ ಕಂಡಿದೆ. ಪ್ರಪಂಚದಾದ್ಯಂತ ತಮ್ಮ ಛಾಪನ್ನು ಮೂಡಿಸಲು ಶ್ರಮಿಸುತ್ತಿದೆ.
‘ಮೇಜರ್ ಲೀಗ್ ಕ್ರಿಕೆಟ್’ ಅಮೆರಿಕದಲ್ಲಿ ನಡೆಯಲಿರುವ ಮೊದಲ ಆವೃತ್ತಿಯ ವೃತ್ತಿಪರ ಟಿ20 ಕ್ರಿಕೆಟ್ ಚಾಂಪಿಯನ್ಷಿಪ್ ಆಗಿದೆ. 2023ರ ಬೇಸಗೆ ಋತುವಿನಲ್ಲಿ ಚೊಚ್ಚಲ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ನಡೆಯಲಿದೆ. ಆಸ್ಟ್ರೇಲಿಯಾದ ಮಾಜಿ ನಾಯಕ ಆರೊನ್ ಫಿಂಚ್ ಫಿಂಚ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ತೆಗೆದುಕೊಂಡಿರುವ ಹಲವು ಸ್ಟಾರ್ ಆಟಗಾರರು ಈ ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕದಲ್ಲಿ ಕ್ರಿಕೆಟ್ ಆಟದ ಜನಪ್ರಿಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಟಿ20 ಸ್ವರೂಪದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯನ್ನು ಆರಂಭಿಸಲಾಗುತ್ತಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.