ಮನೆ ರಾಜ್ಯ ಮೈಸೂರು: ಪಟಾಕಿ ದಾಸ್ತಾನು ಕಾರ್ಖಾನೆಯಲ್ಲಿ ಅಗ್ನಿ ಅವಘಡ

ಮೈಸೂರು: ಪಟಾಕಿ ದಾಸ್ತಾನು ಕಾರ್ಖಾನೆಯಲ್ಲಿ ಅಗ್ನಿ ಅವಘಡ

0

ಮೈಸೂರು: ನಗರದ ಹೊರವಲಯದಲ್ಲಿ ಇರುವ ಹೆಬ್ಬಾಳ ಕೈಗಾರಿಕಾ ಪ್ರದೇಶದ ಪಟಾಕಿ ದಾಸ್ತಾನು ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ.

Join Our Whatsapp Group

ಈ ಬೆಂಕಿ ಸುತ್ತಮುತ್ತಲಿನ ನಾಲ್ಕು ಕಾರ್ಖಾನೆಗಳಿಗೆ ಹರಡಿದ್ದು, ಸ್ಥಳಕ್ಕೆ ಸುಮಾರು 15 ಅಗ್ನಿಶಾಮಕ ದಳ ವಾಹನಗಳು ಬಂದು ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿವೆ.

ಮೈಸೂರು ನಗರದ ಸರಸ್ವತಿಪುರಂ ಅಗ್ನಿ ಶಾಮಕ ಠಾಣೆಯ ಮೂರು ಅಗ್ನಿ ಶಾಮಕ ವಾಹನಗಳು, ಬನ್ನಿಮಂಟಪದ 3, ಹೆಬ್ಬಾಳದ 3, ಆರ್​ಬಿಐನ ಎರಡು, ಹುಣಸೂರು ನಗರದ ಒಂದು, ಟಿ ನರಸೀಪುರದ ಒಂದು, ಕೆ ಆರ್ ನಗರದ ಒಂದು ಹಾಗೂ ಶ್ರೀರಂಗಪಟ್ಟಣದ ಒಂದು ಅಗ್ನಿಶಾಮಕ ವಾಹನ ಬೆಂಕಿಯನ್ನು ನಂದಿಸಲು ಹರಸಾಹಸಪಡುತ್ತಿದ್ದಾರೆ.

ಈ ಬೆಂಕಿ ಅವಘಡ ಸಂಭವಿಸಿರುವ ಸ್ವಲ್ಪ ದೂರದಲ್ಲೇ ಇನ್ಫೋಸಿಸ್ ಕ್ಯಾಂಪಸ್ ಸಹ ಇದೆ.