ಮನೆ ಅಪರಾಧ ಮೂಡುಬಿದಿರೆ: ಅಕ್ಕನ ಗಂಡನಿಂದ ಬಾಮೈದನನ ಕೊಲೆ

ಮೂಡುಬಿದಿರೆ: ಅಕ್ಕನ ಗಂಡನಿಂದ ಬಾಮೈದನನ ಕೊಲೆ

0

ಮೂಡುಬಿದಿರೆ: ಅಕ್ಕನ ಗಂಡನೇ ಬಾಮೈದನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮೇ. 11 ರ ಗುರುವಾರ ಬೆಳಗ್ಗೆ ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆಯಲ್ಲಿ ಸಂಭವಿಸಿದೆ.

Join Our Whatsapp Group

ಗಂಟಾಲ್ಕಟ್ಟೆ ನಿವಾಸಿ ಮಹಮ್ಮದ್ ಜಮಾಲ್ (40) ಮೃತಪಟ್ಟ ವ್ಯಕ್ತಿಯಾಗಿದ್ದು, ಕೊಲೆ ಮಾಡಿದ ಆರೋಪಿ ಸುಹೈಬ್ ನನ್ನು ಬಂಧಿಸಲಾಗಿದೆ.

ಮಹಮ್ಮದ್ ಜಮಾಲ್ ಅವರ ಅಕ್ಕನ ಗಂಡ ಮಹಮ್ಮದ್ ಸುಹೈಬ್ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಕಾರಣ ತಿಳಿದು ಬಂದಿಲ್ಲ.

ಮೂಲತ: ಚಿಕ್ಕಮಗಳೂರಿನವನಾದ ಸುಹೈಬ್ ಗಂಟಾಲ್ಕಟ್ಟೆಯಲ್ಲಿ ಜಮಾಲ್ ಮನೆಯ ಹತ್ತಿರವೇ ವಾಸವಾಗಿದ್ದು ಕ್ಷುಲ್ಲಕ ಕಾರಣದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೂಡುಬಿದಿರೆ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆದಿದೆ.

ಮೂಡುಬಿದಿರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.