ಮನೆ ಅಪರಾಧ ಭದ್ರ ಡ್ಯಾಂ ಪಕ್ಕದ ಕಾಲುವೆಯಲ್ಲಿ ಮುಳುಗಿ ಮೂವರ ಸಾವು

ಭದ್ರ ಡ್ಯಾಂ ಪಕ್ಕದ ಕಾಲುವೆಯಲ್ಲಿ ಮುಳುಗಿ ಮೂವರ ಸಾವು

0

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆ ನೀರಿನಲ್ಲಿ ಆಟವಾಡುವಾಗ ಆಯತಪ್ಪಿ ಬಿದ್ದು ಮೂವರು ಸಾವನ್ನಪ್ಪಿದ್ದಾರೆ.

Join Our Whatsapp Group

ರವಿ(31), ಅನನ್ಯ(17), ಶಾಮವೇಣಿ(16) ಮೃತ ದುರ್ದೈವಿಗಳು.

ರವಿ ಮೂಲತಃ ಲಕ್ಕವಳ್ಳಿ ನಿವಾಸಿ. ಅನನ್ಯ ಮತ್ತು  ಶಾಮವೇಣಿ ರವಿಯ ಸಹೋದರಿಯರ ಮಕ್ಕಳು.

ಅನನ್ಯ ಮೂಲತಃ ಶಿವಮೊಗ್ಗ, ಶಾಮವೇಣಿ ನಂಜನಗೂಡಿನವರು. ಅನನ್ಯ ಮತ್ತ ಶಾಮವೇಣಿ ಲಕ್ಕವಳ್ಳಿ ಸಂಬಂಧಿ ಮನೆಗೆ ಬಂದಾಗ ಘಟನೆ ಸಂಭವಿಸಿದೆ.

ರವಿ ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.