ಲಂಡನ್: ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಮ್ಮೆ ರೋಮಾಂಚನ ನೀಡಲು ಕಾದಿದೆ.
ಈಗಾಗಲೇ ಭಾರತ, ಆಸ್ಟ್ರೇಲಿಯ ತಂಡಗಳ ಕ್ರಿಕೆಟಿಗರು ಲಂಡನ್ ತಲುಪಿದ್ದಾರೆ. ಕಠಿಣ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ 21 ವರ್ಷದ ಯುವ ಆರಂಭಕಾರ ಯಶಸ್ವಿ ಜೈಸ್ವಾಲ್ ಕೂಡ ನೆಟ್ ಪ್ರ್ಯಾಕ್ಟೀಸ್ ಪ್ರಾರಂಭಿಸಿದ್ದಾರೆ. ಇವರು ನಾಯಕ ರೋಹಿತ್ ಶರ್ಮ ಜತೆ 3ನೇ ಬ್ಯಾಚ್‌ನಲ್ಲಿ ಲಂಡನ್ ಗೆ ಆಗಮಿಸಿದ್ದರು. ಮೀಸಲು ಆಟಗಾರ ರುತುರಾಜ್ ಗಾಯಕ್ವಾಡ್ ಮದುವೆಯ ಕಾರಣ ಲಂಡನ್ ಗೆ ತೆರಳದೇ ಇದ್ದುದರಿಂದ ಯಶಸ್ವಿ ಜೈಸ್ವಾಲ್ ಅವರನ್ನು ಆರಿಸಲಾಗಿತ್ತು.
ಯಶಸ್ವಿ ಜೈಸ್ವಾಲ್ ಮೊದಲ ಸಲ ಟೀಮ್ ಇಂಡಿಯಾ ಜತೆ ಅಭ್ಯಾಸ ನಡೆಸುತ್ತಿರುವ ವೀಡಿಯೋ ದೃಶ್ಯಾವಳಿಯನ್ನು ಐಸಿಸಿ ತನ್ನ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ. ಅವರಿಗೆ ಆರ್. ಅಶ್ವಿನ್ ಬೌಲಿಂಗ್ ನಡೆಸಿದ್ದರು. ಅಭ್ಯಾಸದ ಬಳಿಕ ಜೈಸ್ವಾಲ್ ಗೆ ಅಶ್ವಿನ್ ಕೆಲವು ಟಿಪ್ಸ್ ನೀಡುತ್ತಿದ್ದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಂದಲೂ ಜೈಸ್ವಾಲ್ ಕೆಲವು ಉಪಯುಕ್ತ ಟಿಪ್ಸ್ ಪಡೆದರು.
ಇನ್ನೊಂದೆಡೆ ಭಾರತೀಯ ಕ್ರಿಕೆಟಿಗರ ಅಭ್ಯಾಸದ ದೃಶ್ಯಾವಳಿಯನ್ನು ಬಿಸಿಸಿಐ ಕೂಡ ಟ್ವಿಟರ್ ನಲ್ಲಿ ಹಾಕಿದೆ. ಇದರಲ್ಲಿ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ರೋಹಿತ್ ಶರ್ಮ, ಶಾದೂìಲ್ ಠಾಕೂರ್, ಆರ್. ಅಶ್ವಿನ್ ಮೊದಲಾದವರೆಲ್ಲ ಅಭ್ಯಾಸ ನಡೆಸುತ್ತಿದ್ದುದನ್ನು ಕಾಣಬಹುದಿತ್ತು.
ಪೂಜಾರ ಪಾತ್ರ ಮಹತ್ವದ್ದಾಗಲಿದೆ:
ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತ ಅಮೋಘ ಫಾರ್ಮ್ ಪ್ರದರ್ಶಿಸಿರುವ ಚೇತೇಶ್ವರ್ ಪೂಜಾರ ಪಾತ್ರ ಭಾರತ ತಂಡಕ್ಕೆ ಮಹತ್ವದ್ದಾಗಿ ಪರಿಣಮಿಸಲಿದೆ ಎಂಬುದಾಗಿ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
“ಪೂಜಾರ ಸಸೆಕ್ಸ್ ಕೌಂಟಿ ಪರ ಆಡುತ್ತ ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತ ಬಂದಿದ್ದಾರೆ. ಕೌಂಟಿಯ ನಾಯಕತ್ವವನ್ನೂ ವಹಿಸಿದ್ದಾರೆ. ಕೆಲವು ಕಾಲದಿಂದ ಇಂಗ್ಲೆಂಡ್ ನಲ್ಲೇ ಇರುವ ಕಾರಣ ಭಾರತಕ್ಕೆ ಖಂಡಿತವಾಗಿಯೂ ಇವರಿಂದ ನೆರ ವಾಗಲಿದೆ’ ಎಂಬುದಾಗಿ ಗಾವಸ್ಕರ್ ಹೇಳಿದರು. ಕೌಂಟಿ ಋತುವಿನ ವೇಳೆ ಪೂಜಾರ ಓವಲ್‌ನ ಲ್ಲಿ ಆಡಿಲ್ಲ. ಆದರೆ ಸಸೆಕ್ಸ್ ಲಂಡನ್ ನಿಂದ ಬಹಳ ದೂರವೇನಲ್ಲ ಎಂದೂ ಗಾವಸ್ಕರ್ ಹೇಳಿದರು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.