ಮನೆ ಅಪರಾಧ ನ್ಯಾಯಾಧೀಶರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು

ನ್ಯಾಯಾಧೀಶರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು

0

ಮೈಸೂರು (Mysuru) : ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಿಂದ ಬೇಸತ್ತ ವ್ಯಕ್ತಿಯೋರ್ವರು ಮೈಸೂರು ನ್ಯಾಯಾಲಯದ (court)  ಹಿರಿಯ ಶ್ರೇಣಿ ನ್ಯಾಯಾಧೀಶರ ಮುಂದೆ ವಿಷ (Poison) ಕುಡಿದು ಆತ್ಮಹತ್ಯೆ(Suicide)ಗೆ ಯತ್ನಿಸಿರುವ  ಘಟನೆ ನಗರದಲ್ಲಿ ನಡೆದಿದೆ.

ನಗರದ ವಿದ್ಯಾರಣ್ಯಪುರಂ (vidyaranyapuram) ನಿವಾಸಿ ಪ್ರಕಾಶ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣದ ವಿವರ:

ಪ್ರಕಾಶ್ ತನ್ನ ಪತ್ನಿ ಹಾಗೂ ಮಕ್ಕಳ ‌ ಪಿತ್ರಾರ್ಜಿತ ಆಸ್ತಿ ಇರುವ ವಿದ್ಯಾರಣ್ಯಪುರಂನಲ್ಲಿ ವಾಸಿಸುತ್ತಿದ್ದಾರೆ.
ಆಸ್ತಿ ವಿಚಾರಕ್ಕೆ ಇವರರ ತಾಯಿ ಮತ್ತು ಸಹೋದರಿಯರ ನಡುವಿನ ಜಗಳದಿಂದ ಪ್ರಕಾಶ್ ಬೇಸತ್ತಿದ್ದರು ಎನ್ನಲಾಗಿದೆ.ಕುಟುಂಬ ಇಲ್ಲಿಗೂ ಅವರ ಸಹೋದರಿಯರು ಬಂದು ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದರು.

ಇದಕ್ಕೆ ಸಂಬಂಧಿಸಿದಂತೆ 2011 ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ವಿಚಾರಣೆಗೆ ತಾಯಿ ಮತ್ತು ಸಹೋದರಿಯರು ಹಾಜರಾಗುತ್ತಿರಲಿಲ್ಲ ಎಂದು ಹೇಳಲಾಗಿದೆ. ಇದರಿಂದ ಬೇಸರಗೊಂಡ ಪ್ರಕಾಶ್ ಸೋಮವಾರ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿಲ್ಲ ಎಂದು ನ್ಯಾಯಾಧೀಶರ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ‌.

ಪೊಲೀಸರು ವ್ಯಕ್ತಿಯನ್ನು ಕೆ.ಆರ್.ಆಸ್ಪತ್ರೆಗೆ(k.r.hospital) ದಾಖಲಿಸಿದ್ದಾರೆ.