ಮನೆ ರಾಷ್ಟ್ರೀಯ ಕಾರಿಗೆ ಬಸ್ ಡಿಕ್ಕಿ: ಮೂವರ ಸಾವು, 8 ಮಂದಿಗೆ ಗಾಯ

ಕಾರಿಗೆ ಬಸ್ ಡಿಕ್ಕಿ: ಮೂವರ ಸಾವು, 8 ಮಂದಿಗೆ ಗಾಯ

0

ದೆಹಲಿ: ಕಾರೊಂದು ಬಸ್ ​​ಗೆ ಡಿಕ್ಕಿ ಹೊಡೆದ ಪರಿಣಾಮ 3ಜನ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಉತ್ತರ ದೆಹಲಿಯಲ್ಲಿ ಮಧ್ಯಾಹ್ನ ನಡೆದಿದೆ.

Join Our Whatsapp Group

ವ್ಯಾನ್ ಡಿವೈಡರ್​ ಮೇಲೆ ಹತ್ತಿ ರಸ್ತೆಯ ಇನ್ನೊಂದು ಬದಿಯಿಂದ ಬರುತ್ತಿದ್ದ ಡಿಟಿಸಿ ಬಸ್‌ ಗೆ ಡಿಕ್ಕಿ ಹೊಡೆದಿದೆ.

ಉತ್ತರ ದೆಹಲಿಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ವ್ಯಾನ್‌ ನಲ್ಲಿ ಒಟ್ಟು 11 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ 55 ವರ್ಷದ ಸವಿತಾ ಮತ್ತು ಮತ್ತಿಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ವ್ಯಾನ್ ಭಜನಪುರ ನಂದ ನಗ್ರಿ ರಸ್ತೆಯಿಂದ ಬರುತ್ತಿತ್ತು. ವ್ಯಾನ್ ಸಮೀಪದ ಮೇಲ್ಸೇತುವೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​​ ಮೇಲೆ ಜಿಗಿದು ಎದುರಿನಿಂದ ಬರುತ್ತಿದ್ದ ಡಿಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾವನ್ನಪ್ಪಿದವರನ್ನು ಮತ್ತು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.