ಮನೆ ಅಪರಾಧ ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ನಡುವೆ ಗಲಾಟೆ: ಪತ್ನಿ ಸಾವು

ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ನಡುವೆ ಗಲಾಟೆ: ಪತ್ನಿ ಸಾವು

0

Join Our Whatsapp Group

ಪಾಂಡವಪುರ: ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ನಡುವೆ ಗಲಾಟೆಯಾಗಿ ಪತ್ನಿ ಮೃತಪಟ್ಟಿರುವ ಘಟನೆ ತಾಲೂಕಿನ ಡಿಂಕಾ ಗ್ರಾಮದ ಹೊರವಲಯದ ಬೋರೆಯ ಬಳಿ ಗುರುವಾರ ರಾತ್ರಿ ನಡೆದಿದೆ.

ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ನಿವಾಸಿಯಾದ ಗೌತಮ್ ಎಂಬುವರ ಪತ್ನಿ  ವರ್ಷಿತಾ(೨೦) ಮೃತ ಗೃಹಿಣಿ.

ಮೂಲತಃ ರಾಗಿಮುದ್ದನಹಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಮತ್ತು ವರ್ಷಿತಾ ಅವರು ಡಿಂಕಾ ಗ್ರಾಮದ ಹೊರವಲಯದ ಬೋರೆಯ ಬಳಿ ವಾಸವಾಗಿದ್ದರು. ಗುರುವಾರ ರಾತ್ರಿ ಗೌತಮ್ ಹಾಗೂ ವರ್ಷಿತಾ ನಡುವೆ ಪಟ್ಟಣದಲ್ಲಿ ಹೊಸ ಮನೆ ನಿರ್ಮಾಣ ಮಾಡುವ ಸಂಬಂಧ ಮಾತಿಗೆ ಮಾತು ಬೆಳೆದು ಜಗಳ ಆರಂಭಗೊಂಡಿದೆ. ಈ ವೇಳೆ ಕೋಪಗೊಂಡ ಗೌತಮ್ ಜಗಳದಲ್ಲಿ ವೇಳೆ ಆಕಸ್ಮಿಕವಾಗಿ ಪತ್ನಿ ವರ್ಷಿತಾ ಅವರನ್ನು ಜೋರಾಗಿ ತಳ್ಳಿದ್ದಾರೆ.

ಈ ವೇಳೆ ವರ್ಷಿತಾ ತಲೆ ಮನೆಗೆ ಗೋಡೆಗೆ ಹೊಡೆದು ವರ್ಷಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿದ ಕೆ ಆರ್ ಎಸ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಆರೋಪಿ ಗೌತಮ್ ಪರಾರಿರಯಾಗಿದ್ದು ಆತನಿಗಾಗಿ ಪೊಲೀಸರು ಹುಟುಕಾಟ ನಡೆಸಿದ್ದಾರೆ. ಘಟನೆ ಸಂಬಂಧ ಕೆ ಆರ್‌ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.