ಹೆಂಡತಿ ಗಂಡನನ್ನು ಉದ್ದೇಶಿಸಿ:
“ನೋಡಿ ಪಕ್ಕದ ಮನೆ ಅಂಬುಜಮ್ಮ ಹೇಗೆ ಕಾರಿನಲ್ಲಿ ಗಂಡನ ಜೊತೆಯಲ್ಲಿ ಹೋಗುತ್ತಿದ್ದಾಳೆ ನಿಮಗೆ ಏನೂ ಅನ್ನಿಸುವುದಿಲ್ಲವೆ?”
ಗಂಡ : “ಅನ್ನಿಸದೇ ಏನು ನನ್ನನ್ನು ನಿನ್ನ ಕಾರಿನಲ್ಲಿ ಕುಳ್ಳರಿಸಿಕೊಂಡು ಹೋಗು ಎಂದೆ, ಅವಳು ನನ್ನ ಮಾತನ್ನ ಕೇಳಬೇಕಲ್ಲ!”
***
ತಿಂಗಳ ಕೊನೆಯಲ್ಲಿ ಗಂಡ ತನ್ನ ಜೋಬಿನಿಂದ ಬೀಗದ ಕೈ ತೆಗೆದು ಗೋಲಕದ ಬೀಗ ತೆಗೆದ. ಅವನ
ಆಶ್ಚರ್ಯಕ್ಕೆ ಬರೀ ೫೦ ಪೈಸೆ ಹಾಗು ಒಂದು ರೂಪಾಯಿಯ ನಾಣ್ಯಗಳೇ ಇದ್ದವು. ಗಂಡನಿಗೆ ತುಂಬಾ
ಕೋಪಬಂತು. ಹೆಂಡತಿಯನ್ನು ಕೇಳಿದ “ಈ ನಾಣ್ಯಗಳೆಲ್ಲಾ ಹೇಗೆಬಂದವು ನಾನು ನಾಲ್ಕಾಣೆ
ನಾಣ್ಯಗಳನ್ನು ಹಾಕುತ್ತಿದ್ದೆ?”. ರೇಗಿದ
ಹೆಂಡತಿ: ಚುರುಕಾಗಿ ಉತ್ತರಿಸಿದಳು: “ಎಲ್ಲರೂ ನಿಮ್ಮಷ್ಟು ಜಿಪುಣರಲ್ಲ!”