ರಾಮ… ರಾಮ… ಶ್ರೀ ರಾಮ ಜಯ ರಾಮ |
ಎಲ್ಲಿದೆ ಆ ಪಾದ ಎಲ್ಲಿದೆ ಆ ಪಾದ |
ಕಲ್ಲಿಗೆ ಜೀವ ತುಂಬಿದ ಶ್ರೀ ಪಾದ ||
ಹನುಮನು ನಂಬಿದ ರಾಮನ ಪಾದ ||ಎಲ್ಲಿದೆ ಆ ಪಾದ||
ಬಾಳಲಿ ಒಮ್ಮೆ ಕಂಡರೆ ಸಾಕು
ಕಣ್ಗಳ ತುಂಬಾ ತುಂಬಲಿ ಸಾಕು||
ಕೈಗಳು ಒಮ್ಮೆ ಮುಟ್ಟಲಿ ಸಾಕು||
ಆನಂದವೇ ಎಂದಿಗೂ ಸಾಕು|| ಎಲ್ಲಿದೆ ಆ ಪಾದ||
ಕಂಬನಿ ಇಂದ ಪಾದವ ತೊಳವೆ , ಮನವನೇ ಮಲ್ಲಿಗೆ ಮಾಡಿ ಇಡುವೆ||
ಕಣ್ಣಿನ ಬೆಳಕಲ್ಲಿ ಆರತಿ ಮಾಡಿ||
ಚರಣದಿ ಶಿರವನು ನಾನಿಡಬೇಕು|| ಎಲ್ಲಿದೆ ಆ ಪಾದ||