ಮನೆ ಅಪರಾಧ ತೀರ್ಥಹಳ್ಳಿಯಲ್ಲಿ ಮಿಸ್ ಫೈರಿಂಗ್: ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

ತೀರ್ಥಹಳ್ಳಿಯಲ್ಲಿ ಮಿಸ್ ಫೈರಿಂಗ್: ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

0

ತೀರ್ಥಹಳ್ಳಿ : ತಾಲೂಕಿನ ಆರಗ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸನಗದ್ದೆಯ ಬಳಿ ಫೈರಿಂಗ್ ಆಗಿದ್ದು‌, ಗುಂಡು ಹೊಡೆತ ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

Join Our Whatsapp Group

ಪಟ್ಟಣದ ಆರಗದ ಸಮೀಪದ ದಾಸನಗದ್ದೆ ಗ್ರಾಮದಲ್ಲಿ ಆ.5ರ ಶುಕ್ರವಾರ ತಡರಾತ್ರಿ ರಾಕೇಶ್ ಎಂಬವರ ತೊಡೆಗೆ ಗುಂಡು ಹಾರಿದೆ. ಮಿಸ್ ಫೈರಿಂಗ್ ಆಗಿದೆ ಎಂಬ ಮಾಹಿತಿ  ಲಭ್ಯವಾಗಿದೆ.

ಮಾಹಿತಿ ಪ್ರಕಾರ ತೋಟಕ್ಕೆ ಗನ್‌ ತೆಗೆದುಕೊಂಡ ಹೋದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು, ಮಿಸ್ ಫೈರಿಂಗ್ ಆಗಿರಬಹುದು ಎಂದು ಹೇಳಾಗುತ್ತಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ರವರಿಂದ ತಿಳಿದು ಬರಬೇಕಿದೆ. 

ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.