ಮನೆ ಅಪರಾಧ ಕತ್ತಿಯಿಂದ‌ ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿಯಾದ ದುಷ್ಕರ್ಮಿ

ಕತ್ತಿಯಿಂದ‌ ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿಯಾದ ದುಷ್ಕರ್ಮಿ

0

ಬೆಂಗಳೂರು(Bengaluru): ನೆರವು ನೀಡಲು ಆಗಮಿಸಿದ ಬೈಕ್ ಸವಾರನ ಮೇಲೆ ದುಷ್ಕರ್ಮಿಯೊಬ್ಬ ಕತ್ತಿಯಿಂದ‌ ಹಲ್ಲೆ ಮಾಡಿ ಬೈಕ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರಮಾವಿನ ವಿಜಯಾ ಬ್ಯಾಂಕ್ ಕಾಲೋನಿಯ ಬಳಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ,

ಘಟನೆಯಲ್ಲಿ ‘ಪೀಪಲ್ ಫಾರ್ ಅನಿಮಲ್ಸ್’ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ತರುಣ್ ಅಗರವಾಲ್ ಎಂಬುವರು ಹಲ್ಲೆಗೊಳಗಾಗಿದ್ದಾರೆ.

ಕಳೆದ ಮೇ 18ರ ರಾತ್ರಿ ಹೊರಮಾವು ರಸ್ತೆಯಲ್ಲಿ ನಾಯಿಗಳಿಗೆ ಆಹಾರ ಹಾಕಲು ಬರುವಾಗ ಮಾರ್ಗ ಮಧ್ಯೆ ಬೈಕ್ ಅಡ್ಡಗಟ್ಟಿದ್ದ ದುಷ್ಕರ್ಮಿ ಬೈಕ್​​ನಲ್ಲಿ‌ ಪೆಟ್ರೋಲ್ ಖಾಲಿಯಾಗಿದೆ, ಸಹಾಯ ಮಾಡುವಂತೆ ಕೇಳಿಕೊಂಡಿದ್ದ.ಇದಕ್ಕೆ ತರುಣ್ ಸಮ್ಮತಿ ಸೂಚಿಸಿದ್ದ. ಕ್ಷಣಾರ್ಧದಲ್ಲಿ ಬೈಕ್ ಸೀಟ್​​ನಲ್ಲಿದ್ದ ಕತ್ತಿ ತೆಗೆದು ಹಲ್ಲೆ ನಡೆಸಿದ್ದಾನೆ. ನೋಡ ನೋಡುತ್ತಿದ್ದಂತೆ ಬೈಕ್ ಸಮೇತ ಎಸ್ಕೇಪ್ ಆಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

ಬೈಕ್ ಡಿಕ್ಕಿಯಲ್ಲಿದ್ದ ಎರಡು ಮೊಬೈಲ್ ಹಾಗೂ ಎಟಿಎಂ ಕಾರ್ಡ್ ಸಮೇತ ಕಳ್ಳ ಪರಾರಿಯಾಗಿದ್ದಾನೆ ಎಂದು ತರುಣ್ ದೂರಿನಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಪಠ್ಯ ಪರಿಷ್ಕರಣೆ ತಪ್ಪು ಸರಿಪಡಿಸಲು ಪರ್ಯಾಯ ಕಾರ್ಯಕ್ರಮ: ದೇವನೂರು ಮಹಾದೇವ
ಮುಂದಿನ ಲೇಖನಮಹದೇಶ್ವರ ಬೆಟ್ಟ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದನ್ನು ಕೈಬಿಡುವಂತೆ ಆಗ್ರಹಿಸಿ  ಬೃಹತ್ ಪ್ರತಿಭಟನೆ