ಮನೆ ಮನರಂಜನೆ “ಭೀಮ’ ಸಿನಿಮಾಗೆ ದುನಿಯಾ ವಿಜಯ್‌ ಹಿನ್ನೆಲೆ ಸಂಗೀತ

“ಭೀಮ’ ಸಿನಿಮಾಗೆ ದುನಿಯಾ ವಿಜಯ್‌ ಹಿನ್ನೆಲೆ ಸಂಗೀತ

0

ದುನಿಯಾ ವಿಜಯ್‌ ನಿರ್ದೇಶಿಸಿ, ನಟಿಸುತ್ತಿರುವ “ಭೀಮ’ ಸಿನಿಮಾದ ಶೂಟಿಂಗ್‌ ಮುಗಿದಿದ್ದು, ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿವೆ. ಸದ್ಯ ಚಿತ್ರದ ಹಿನ್ನೆಲೆ ಸಂಗೀತ ಭರದಿಂದ ಸಾಗುತ್ತಿದೆ. ಸಂಗೀತ ನಿರ್ದೇಶಕ ಚರಣ್‌ ರಾಜ್‌ ಜೊತೆ ವಿಜಯ್‌ ಹಿನ್ನೆಲೆ ಸಂಗೀತ ಮಾಡಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ರಿಲೀಸ್‌ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ.

ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ಹಿಟ್‌ಲಿಸ್ಟ್‌ ಸೇರಿದೆ. ಅಲ್ಲಿರುವ ಡೈಲಾಗ್‌- ಕೌಂಟರ್‌ ಡೈಲಾಗ್‌ ಇದ್ದು, ಇದು ಸಿನಿಮಾದ ಕ್ರೇಜ್‌ ಹೆಚ್ಚಿಸಿರುವುದಂತೂ ಸುಳ್ಳಲ್ಲ. “ಸಲಗ’ ಚಿತ್ರದ ಬಳಿಕ “ದುನಿಯಾ’ ವಿಜಯ್‌ ನಿರ್ದೇಶಿಸಿ, ನಟಿಸುತ್ತಿರುವ ಸಿನಿಮಾ “ಭೀಮ’ ಆಗಿದ್ದು, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಈ ಬಾರಿಯೂ ವಿಜಯ್‌ ತಮ್ಮ ಮಾಸ್‌ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡು ಕಥೆ ಮಾಡಿದ್ದು, ಮತ್ತೂಂದು ಹಿಟ್‌ ಸಿನಿಮಾ ವಿಶ್ವಾಸ ಕೂಡಾ ಅವರಿಗಿದೆ. ಈ ಚಿತ್ರವನ್ನು ಕೃಷ್ಣ ಸಾರ್ಥಕ್‌ ಹಾಗೂ ವಿತರಕ ಜಗದೀಶ್‌ ಗೌಡ ನಿರ್ಮಾಣ ಮಾಡುತ್ತಿದ್ದಾರೆ.