ಮನೆ ಮನರಂಜನೆ ಕೆಜಿಎಫ್: ಚಾಪ್ಟರ್-2: ಹಿಂದಿ ಚಿತ್ರರಂಗದಲ್ಲಿ ಎಲ್ಲಾ ದಾಖಲೆ ಉಡೀಸ್

ಕೆಜಿಎಫ್: ಚಾಪ್ಟರ್-2: ಹಿಂದಿ ಚಿತ್ರರಂಗದಲ್ಲಿ ಎಲ್ಲಾ ದಾಖಲೆ ಉಡೀಸ್

0

ಬೆಂಗಳೂರು(Bengaluru): ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1(KGF Chapter1) ಹಾಗೂ ಚಾಪ್ಟರ್ 2(Chpater-2) ಸಿನಿಮಾ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಸ್ಯಾಂಡಲ್ ವುಡ್'(Sandalwood) ಘನತೆಯನ್ನು ಹೆಚ್ಚಿಸಿವೆ. ಅದರಲ್ಲೂ ಕೆಜಿಎಫ್ ಚಾಪ್ಟರ್ 2 ಅಬ್ಬರಕ್ಕೆ ಬಾಲಿವುಡ್(Bollywood) ನ ಮೊದಲ ದಿನದ ಕಲೆಕ್ಷನ್ ದಾಖಲೆಗಳು ಉಡೀಸ್ ಆಗಿವೆ. 

ಸ್ಯಾಂಡಲ್ ವುಡ್ ನತ್ತ ಇಡೀ ಭಾರತೀಯ ಸಿನಿಮಾ ರಂಗವೇ ತಿರುಗಿ ನೋಡುವಂತೆ ಮಾಡಿದೆ. ಕೆಜಿಎಫ್ ಚಾಪ್ಟರ್ 2 ಮಾಡಿರುವ ಮೋಡಿಗೆ ಬಾಲಿವುಡ್ ಖ್ಯಾತ ನಿರ್ದೇಶಕ ರಾಜಗೋಪಾಲ್ ವರ್ಮಾ, ಪಿಧಾ ಆಗಿದ್ದು, ಕನ್ನಡದ ಡಬ್ಬಿಂಗ್ ಚಿತ್ರ ಮಾಡಿರುವ ದಾಖಲೆಯನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಆರ್ ಜಿವಿ ನೀಡಿರುವ ಮಾಹಿತಿ ಪ್ರಕಾರ ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಕೆಜಿಎಫ್ 2 ಅಗ್ರಸ್ಥಾನದಲ್ಲಿದ್ದರೆ, ಬಾಹುಬಲಿ-2 ಎರಡನೇ ಸ್ಥಾನದಲ್ಲಿದೆ. ಈ ಎರಡು ಸಿನಿಮಾಗಳು ಕ್ರಮವಾಗಿ 38-39 ಹಾಗೂ 37,53,00,000 ಕಲೆಕ್ಷನ್ ಮಾಡಿವೆ.

ತದನಂತರ ವಾರ್ – 29,53,00,000, ಥಂಗ್ಸ್ ಆಫ್ ಹಿಂದೂಸ್ತಾನ್ 26,27,00,000, ಟೈಗರ್ ಜಿಂದಾ ಹೈ 24,27,00,000,
ಭಾರತ್ -23,47,00,000, ಸುಲ್ತಾನ್ -21,53,00,000, ಸಂಜು-20,35,00,000, ರೇಸ್ -3 19,16,00,000 ಮತ್ತು ದಂಗಾಲ್ 18,84,00,000 ಕಲೆಕ್ಷನ್ ಮಾಡಿವೆ.

ಕೆಜಿಎಫ್ ಚಾಪ್ಟರ್ 2 ಹಾಗೂ ಬಾಹುಬಲಿ 2 ಹಿಂದಿ ಚಿತ್ರರಂಗದಲ್ಲಿ ಭರ್ಜರಿ ಒಪನಿಂಗ್ ನೀಡಿದ್ದು, ಈ ಸಿನಿಮಾಗಳ ಬಗ್ಗೆ ಹಿಂದಿ ಚಿತ್ರರಂಗ ಚಿಂತಿಸಬೇಕಾಗಿದೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.