ಗೋಪಿ : ಬ್ಯೂಟಿ ಪಾರ್ಲರ್ ಗಳಿಂದ ನಮಗೆ ತುಂಬಾ ಕನ್ಫ್ಯೂಸ್ ಆಗುತ್ತೆ ಕಿಟ್ಟಿ
ಕಿಟ್ಟಿ: ನಿನಗೆ ಏನಾಯಿತು?
ಗೋಪಿ : ಪಾರ್ಲರ್ ನಿಂದ ಯಾರೋ ಹುಡುಗಿ ಈಚೆ ಬಂದಿದ್ದಳು ಫಾಲೋ ಮಾಡ್ದೆ ಕಡೆಗೆ ನೋಡಿದರೆ ಆಕೆ ಹಿಂದಿನ ಬೀದಿಲಿರೋ ಗೌರಜ್ಜಿ
-*-**–*
ಎರಡು ದಿನದ ಹಿಂದೆ ಭೇದಿಯಾಗಿ ಚೇತರಿಸಿಕೊಂಡಿದ್ದ ಹೊಟ್ಟೆ ಭಾಗ ಮಗನಿಗೆ ತಿಂಡಿ ಕೊಡುತ ತಾಯಿ ಹೆಚ್ಚು ತಿನ್ನಬೇಡ ಮತ್ತೆ ಆದರೆ ಕಷ್ಟ ಎಂದಳು.
ಮಗ : ಅದು ಭೂತಕಾಲ ಕಣಮ್ಮ.
ತಾಯಿ: (ಗಂಭೀರವಾಗಿ) ಆ ಭೂತ ಭವಿಷ್ಯತ್ ಕಾಲಕ್ಕೂ ಮುಂದುವರೆಯುವುದು ಬೇಡ ಎಂದಳು.
*****
ವೈದ್ಯರು : ನೋಡಿ ನಿಮ್ಮ ಆರೋಗ್ಯ ಸುಧಾರಣೆ ಆಗಬೇಕು ಅಂದ್ರೆ ಚಿಂತೆ ಬಿಡಿ ಆರಾಮಾಗಿ ಜೀವನ ಮಾಡೋಕೆ ಪ್ರಾರಂಭ ಮಾಡಿ.
ಸೀನ : ನೀವು ಹೇಳೋದು ನೋಡಿದ್ರೆ ನಾನು ಆಫೀಸ್ ಗೆ ಹೋಗೋದನ್ನ ಸಂಪಾದನೆ ಮಾಡೋದನ್ನ ಬಿಡಬೇಕು, ಅವೆರಡನ್ನು ಬಿಟ್ರೆ ಆರಾಮ್ ಎಲ್ಲಿ ಡಾಕ್ಟ್ರೇ?
****
ಜಗ್ಗು ಮಾವ ನಾನು ಒಂದೈವತ್ತು ಸಾವಿರ ಹಾಕಿ ಬ್ಯುಸಿನೆಸ್ಸು ಮಾಡಬೇಕು ಅಂತಿದ್ದೀನಿ ಆದ್ರೆ ಸ್ವಲ್ಪ ಅಮೌಂಟ್ ಶಾರ್ಟೆಜ್ ಬಂದಿದೆ…
ಮಾವ : ಎಷ್ಟು ಕಡಿಮೆ ಇದಿಯಪ್ಪ?
ಜಗ್ಗು : 49,999 ರೂಪಾಯಿ ಮಾವ!