ಮನೆ ಕ್ರೀಡೆ ಇಂದಿನಿಂದ ಏಷ್ಯಾಕಪ್  ಆರಂಭ: ಮೊದಲ ಪಂದ್ಯ ನೇಪಾಳ ಮತ್ತು ಪಾಕಿಸ್ತಾನ

ಇಂದಿನಿಂದ ಏಷ್ಯಾಕಪ್  ಆರಂಭ: ಮೊದಲ ಪಂದ್ಯ ನೇಪಾಳ ಮತ್ತು ಪಾಕಿಸ್ತಾನ

0

ಈ ಟೂರ್ನಿಯ ಮೊದಲ ಪಂದ್ಯ ನೇಪಾಳ ಮತ್ತು ಪಾಕಿಸ್ತಾನ ನಡುವೆ ಮುಲ್ತಾನ್ ಕ್ರೀಡಾಂಗಣ ದಲ್ಲಿ  ನಡೆಯಲಿದೆ, ಈ ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸುತ್ತಿದ್ದು, ಇದರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಸೇರಿವೆ. ಇನ್ನು ಮೊದಲ ಪಂದ್ಯ ಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯಲ್ಲಿದ್ದು, ಈ ಸಮಾರಂಭದಲ್ಲಿ ಖ್ಯಾತ ತಾರೆಯರು ಪ್ರದರ್ಶನ ನೀಡಲಿದ್ದಾರೆ.

ಮುಲ್ತಾನ್ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ  ಆರಂಭವಾಗಲಿದೆ. ಏಷ್ಯಾಕಪ್ ನ ನೇರ ಪ್ರಸಾರ OTT ಪ್ಲಾಟ್ ಫಾರ್ಮ್ ಹಾಟ್ ಸ್ಟಾರ್ ನಲ್ಲಿ ವೀಕ್ಷಿಸಬಹುದು.

ನೇಪಾಳ ತಂಡ: ರೋಹಿತ್ ಪೌಡೆಲ್ (ನಾಯಕ), ಆಸಿಫ್ ಶೇಖ್, ಕುಶಾಲ್ ಭುರ್ಟೆಲ್, ಲಲಿತ್ ರಾಜಬಂಶಿ, ಭೀಮ್ ಸರ್ಕಿ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಗುಲ್ಶನ್ ಝಾ, ಸೋಂಪಾಲ್, ಆರಿಫ್ ಶೇಖ್, ಪ್ರತಿಸ್ ಜಿಸಿ, ಕಿಶೋರ್ ಮಹತೋ, ಅರ್ಜುನ್, ಸಂದೀಪ್ ಜೋರಾ, ಸೌದ್ ಮತ್ತು ಶ್ಯಾಮ್ ಧಾಕಲ್.

ಪಾಕಿಸ್ತಾನ ತಂಡ: ಬಾಬರ್ ಆಝಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ತಯ್ಯಬ್ ತಾಹಿರ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್ , ಮೊಹಮ್ಮದ್ ನವಾಜ್ , ಉಸಾಮಾ ಮಿರ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ ಮತ್ತು ಶಾಹೀನ್ ಅಫ್ರಿದಿ.