ಮಹಿಳೆ: ಡಾಕ್ಟರ್, ಮಗು ಯಾಕೋ ವಿಪರೀತ ಹೆದರಿಕೊಂಡಿದೆ ನೋಡಿ.
ಡಾಕ್ಟರ್ : ನೀವು ನಿಮ್ಮ ಯಜಮಾನರನ್ನು ಬೈಯುವಾಗ ಮುಖಕೆಟ್ಟದಾಗಿ ಮಾಡ್ಕೋಬೇಡಿ, ಅದಕ್ಕೆ ಮಗು ಹೆದರಿಕೊಂಡಿದೆ. ಇನ್ಮೇಲೆ ನಿಮ್ಮೆಜಮಾನ್ರನ್ನ ಬೈಯುವಾಗ ನಗುಮುಖ ಮಾಡ್ಕೊಂಡೆ ಬೈರಿ. ಮಹಿಳೆ : ನಿಮಗೆ ಇದು ಹೇಗೆಗೊತ್ತಾಯ್ತು ಡಾಕ್ಟರ್?
ಡಾಕ್ಟರ್ : ನಮ್ಮಲ್ಲೂ ಇದೆ ಹಣ ಬರಹ.
***
“ಒಂದು ಚಿನ್ನದ ನಗೆಮಾತು ಇದೆ. ಅದನ್ನು ನಿನಗೆ ಹೇಳಿದರೆ ನೀನು ನಕ್ಕು ನಕ್ಕು ಸಾಯುತ್ತಿ”. “ಹಾಗಾದ್ರೆ ಸ್ವಲ್ಪ ತಾಳು. ಅದನ್ನು ನನ್ನ ಮಾವನಿಗೆ ಹೇಳು ಅವನನ್ನ ನಿನ್ನ ಬಳಿ ಕಳಿಸುತ್ತೇನೆ”
***
ಜಗ್ಗುಮಗ : ಅಜ್ಜ ಒಂದೇ ಒಂದು ಸಲ ಕಣ್ಣು ಮುಚ್ತಿಯ?
ಅಜ್ಜ : ಯಾಕೆ?!
ಜಗ್ಗುಮಗ : ಅಮ್ಮ ಹೇಳ್ತಾ ಇದ್ಲು ಈ ಮುದುಕ ಕಣ್ಣು ಮುಚ್ಚಿದರೆ ತುಂಬಾ ಹಣ ಸಿಗುತ್ತೆ ಅಂತ……
***
ಮಗು: ಅಮ್ಮ ಈಗ ಬಂದು ಅಪ್ಪನ ಜೊತೆ ಮಾತಾಡ್ತಿದ್ದಾರಲ್ಲ ಅವರು ಅಪ್ಪನ ಫ್ರೆಂಡ ?
ಅಮ್ಮ : ಹೌದು ಪಾಪು.
ಮಗು : ಮತ್ತೇಕಮ್ಮ ಅವರ ತಲೆಯಲ್ಲಿ ಒಂದು ಕೂದಲು ಇಲ್ಲ.?
ಅಮ್ಮ: ಹಾಗೆಲ್ಲ ಹೇಳಬಾರದು. ಅವರಿಗೆ ಕೇಳಿಸುತ್ತೆ.
ಮಗು : ಯಾಕಮ್ಮ ಅವರಿಗೆ ಗೊತ್ತಿಲ್ವಾ?….