ಮನೆ ದೇವರ ನಾಮ ಹೂವ ತನ್ನಿರಿ ಎಲ್ಲ

ಹೂವ ತನ್ನಿರಿ ಎಲ್ಲ

0

ಹೂವ ತನ್ನಿರಿ ಎಲ್ಲರು |

ಹೂವ ತನ್ನಿರಿ ಎಲ್ಲ ಹೂವು ತನ್ನಿರಿ |

ಪಾದಪೂಜೆಯ ಮಾಡೋಣ |

 ಗುರುಪಾದ ಪೂಜೆಯ ಮಾಡೋಣ |

ಹೂವ ತನ್ನಿರಿ ಎಲ್ಲಾ ಹೂವ ತನ್ನಿರಿ |

ತೋಂಟದಾರ್ಯನೆ ಸಲಹು, ಯೋಗಿರ್ವಯನೆ ಸಲಹು || 

ಸಿದ್ದಲಿಂಗ ಯತೀ || ನೀನೇ ಎನೆಗೆ ಗತಿ |

ರಕ್ಷಿಸೆಂದು ಬೇಡಿಕೊಳ್ಳುತ,  ಪಾದ ಪೂಜೆಯ ಮಾಡೋಣ |

ಗುರುಪಾದ ಪೂಜೆಯ ಮಾಡೋಣ || ಹೂವ||

ಮನದ ಕಳವಳ ನೀಗು ಎನ್ನುತ |

ಮಲ್ಲಿಗೆ ಮಾಲೆ ಹಾಕೋಣ |

ಶಾಂತಿ ನೆಮ್ಮದಿ ನೀಡು ಎನ್ನುತ |

ಶಾಮಂತಿಗೆ ಹೂ ಹಾಕೋಣ |

ತುಂಬು ಭಕ್ತಿಯ ಹೃದಯದಿ ||

ತುಂಬಾ ಭಕ್ತಿಯ ಹೃದಯದಿ ಎನ್ನುತ |

ತುಂಬೆ ಹೂವನ್ನು ಹಾಕೋಣ ||

ಸೇವೆ ಮಾಡುವ ಭಾಗ್ಯ ಬೇಡುತ |

ಸಂಪಿಗೆ ಹೂವ ಹಾಕೋಣ || ಹೂವ ||