ಮನೆ ರಾಜ್ಯ ವಜ್ರ, ಚಿನ್ನಾಭರಣ ಕಳ್ಳತನ ಮಾಡಿದ್ದ ಕ್ಯಾಬ್ ಚಾಲಕನ ಬಂಧನ

ವಜ್ರ, ಚಿನ್ನಾಭರಣ ಕಳ್ಳತನ ಮಾಡಿದ್ದ ಕ್ಯಾಬ್ ಚಾಲಕನ ಬಂಧನ

0

ಬೆಂಗಳೂರು: ಉದ್ಯಮಿಯೊಬ್ಬರಿಂದ ವಜ್ರ, ಚಿನ್ನಾಭರಣ ಕಳ್ಳತನ ಮಾಡಿದ್ದ ಕ್ಯಾಬ್​ ಚಾಲಕನನ್ನು ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ.

ರಾಜಾನುಕುಂಟೆ ಮೂಲದ ಕ್ಯಾಬ್ ಚಾಲಕ ನಂದೀಶ್ ಬಂಧಿತ ಆರೋಪಿ.

ಬಂಧಿತ ಆರೋಪಿಯಿಂದ 30 ಲಕ್ಷ ಮೌಲ್ಯದ 485 ಗ್ರಾಂ ಚಿನ್ನ, 17 ಕ್ಯಾರೆಟ್ ತೂಕದ ವಜ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉದ್ಯಮಿಯೊಬ್ಬರು ಚೆನ್ನೈನಿಂದ ಬೆಂಗಳೂರಿಗೆ ಮದುವೆಗೆ ಬಂದಿದ್ದರು. ಉದ್ಯಮಿ ನಗರದ ಯಲಹಂಕ ಬಳಿಯ ಹೊಟೇಲ್ ​ನಲ್ಲಿ ಉಳಿದುಕೊಂಡಿದ್ದರು. ಮದುವೆ ಮುಗಿಸಿ ವಾಪಸ್ ತೆರಳುತ್ತಿರುವ ವೇಳೆ ಸೂಟ್ ​​ಕೇಸ್ ಕದ್ದುಕೊಂಡು ಪರಾರಿಯಾಗಿದ್ದಾನೆ.

ಈ ಬಗ್ಗೆ ಉದ್ಯಮಿ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.