ಮನೆ ದೇವರ ನಾಮ ಓಡಿ ಬಂದೆ

ಓಡಿ ಬಂದೆ

0

ಓಡಿ ಬಂದೆ ನಿನ್ನ ದರುಶನಕೆಂದೆ |

ನೋಡು ನನ್ನ ದಯ ತೋರಿ ಇಂದೆ |

ಓಡಿ ಬಂದೆ ನಿನ್ನ ದರುಶನಕೆoದೆ || ಪ ||

ಜಗದೊಳಗೆ ನಿನ್ನ ಮಹಿಮೆ ಪೊಗಳುತ |

ನಗುತ ನಿನ್ನ ದಿನವೂ ಹಾಡುತ ಪಾಡುತ |

ಕುಣಿಯುವ ತಣಿಯುತ ನಾ ಬರುವೆ |

ಮಣಿಯುತ ನಿನ್ನಡಿಗೆರಗುತ ನಲಿಯುವೆ ||

ಓಡಿ ಬಂದೆ ನಿನ್ನ ದರ್ಶನಕೆಂದೆ || 1

ಅಗಾಧಮಹಿಮೆಯು ನಿನ್ನದು ತಾಯೇ |

ಬಗೆ, ಬಗೆ ರೂಪವು ನಿನ್ನದು ಮಾಯೇ |

ಜನನಿ, ಜನಕ ಎಲ್ಲವೂ ನೀನೇ |

ಮನವು ನಿನ್ನನು ನಂಬಿದೆ ಕರುಣೆ |

ಓಡಿ ಬಂದೆ ನಿನ್ನ ದರುಶನ ಕೆಂದೆ || 2

ರಾಗಿಣಿ, ರಂಜಿನಿ ಮೋಹಿನಿ ಭವಾನಿ |

ಸುರ ತರಂಗಿಣಿ ಕಾತ್ಯಾಯಿನಿ ಕಲ್ಯಾಣಿ |

ಭಕ್ತರಿಗೆ ಒಲಿದೊಲಿದು ಬರುವ ದಾಕ್ಷಾಯಣಿ |

ಜಾಹ್ನವಿ ವಿಠ್ಠಲನ ನೆನೆಯುವಂತೆ ಮಾಡೆ ಕಲ್ಯಾಣಿ |

ಓಡಿ ಬಂದೆ ನಿನ್ನ ದರುಶನಕೆಂದೆ || 3