ಮನೆ ಯೋಗಾಸನ ವಾಕಿಂಗ್ ನಡೆದಾಡುವಿಕೆ ಅಥವಾ ವಾಯುವಿಹಾರ

ವಾಕಿಂಗ್ ನಡೆದಾಡುವಿಕೆ ಅಥವಾ ವಾಯುವಿಹಾರ

0

ಈ ನಡೆದಾಡುವಿಕೆ ಅಥವಾ ವಾಕಿಂಗ್ ಎನ್ನುವುದು ತುಂಬಾ ಸರಳವಾದ ಮತ್ತು ಉಪಯುಕ್ತವಾದ ವ್ಯಾಯಾಮವಾಗಿದೆ ಪ್ರತಿದಿನ ಕನಿಷ್ಠ ಒಂದು ಕಿಲೋಮೀಟರ್ನಿಂದ ಪ್ರಾರಂಭಿಸಿ 3 ಅಥವಾ 4 km ವರೆಗೆ ವಾಕಿಂಗ್ ಮಾಡುವ ರೂಢಿ ಮಾಡಿಕೊಂಡರೆ ಸಾಕು. ಇನ್ನು ಸಾಧಾರಣ ಅಥವಾ ನಿಧಾನಗತಿಯ ವಾಕಿಂಗ್ ಗಿಂತ ಅದನ್ನೇ ಸ್ವಲ್ಪ ದಾವಂತ ಅಥವಾ ರಬಸದಿಂದ ಮಾಡಿದರೆ ಬಹಳ ಪ್ರಯೋಜನಗಳು ದೊರೆಯುತ್ತದೆ ಅದಕ್ಕೆ ರಭಸದ ನಡಿಗೆ ಅಥವಾ ಬ್ರಿಸ್ಕ್ ವಾಕಿಂಗ್ ಎನ್ನುತ್ತಾರೆ.

ಬೆನ್ನು ನೆರವಾಗಿಸಿಕೊಂಡು ಮೈ ಕೈಗಳನ್ನು ಸಡಿಲು ಬಿಟ್ಟುಕೊಂಡು, ನಡೆಯುವ ದಾರಿಯೇ ದಾರಿಯ ಮೇಲೆ ಗಮನವನ್ನು ನಿಲ್ಲಿಸಿಕೊಂಡು ವಾಕಿಂಗ್ ಮಾಡಬೇಕು ವಾಕಿಂಗ್ ಮಾಡುವ ದಾರಿಯನ್ನು ರಸ್ತೆ ಸಾಧ್ಯವಾದಷ್ಟು ವಾಹನಗಳ ಹೊಗೆಯಿಂದ ಮುಕ್ತವಾಗಿದ್ದರೆ ಒಳ್ಳೆಯದು. ಧೂಳು ತುಂಬಿರಕೂಡದು ಆದ್ದರಿಂದಾಗಿ ಆರೋಗ್ಯಕ್ಕೆ ಹಾನಿಕಾರ ಸಾಧ್ಯವಿದ್ದಷ್ಟು ಮೌನವಾಗಿ ವಾಕಿಂಗ್ ಮಾಡಬೇಕು. ಇತರರೊಂದಿಗೆ ಮಾತನಾಡುತ್ತಾ ನಿಧಾನವಾಗಿ ವಾಕಿಂಗ್ ಮಾಡುವುದು ಕೂಡ ಸರಿಯಲ್ಲ.

ಇನ್ನು ಅಭ್ಯಾಸವಿಲ್ಲದೆ.. ಒಮ್ಮೆಲೇ ಬ್ರಿಸ್ಕ್ ವಾಕಿಂಗ್ ಪ್ರಾರಂಭಿಸಿದರೆ ಅದು ಕಷ್ಟವಾಗಬಹುದು. ಅಂತಹ ಸಂದರ್ಭದಲ್ಲಿ ನಿದಾನವಾಗಿ ವೇಗವನ್ನು ಹೆಚ್ಚಿಸುತ್ತಾ ಹೋಗಬಹುದು. ಯಾವುದೇ ವಿಧವಾದ ಅಭ್ಯಾಸವನ್ನು ನಮಗೆ ಆಯಾಸ ಮತ್ತು ತೊಂದರೆ ಎನಿಸಿದಂತೆ ಮಾಡುವುದು ತುಂಬಾ ಒಳ್ಳೆಯದು. ಇನ್ನು ಸಮಯ ಬೇಳಗಿನ ಜಾವವು ಅತ್ಯಂತ ಸೂಕ್ತವಾದದ್ದು. ಅದರಲ್ಲೂ ಸೂರ್ಯೋದಯಕ್ಕಿಂತಲೂ ಮೊದಲು ವಾಕಿಂಗ್ ಮುಗಿಸಿದರಂತೂ ಅತಿ ಉತ್ತಮ ಆಗ ವಾತಾವರಣದಲ್ಲಿ ಓಜೋನ್ ಎಂಬ ವಾಯುವಿನ ಅಂಶವು ಹೆಚ್ಚಿದ್ದು, ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಜೊತೆಗೆ ವಾತಾವರಣ ಕೂಡ ತುಂಬಾ ತಿಳಿಯಾಗಿದ್ದು ನಮಗೆ ಶುದ್ಧವಾದ ಗಾಳಿ ದೊರೆಯುವುದು. ಮತ್ತು ದೂಳು ವಾಹನಗಳ ಹೊಗೆ ಕೂಡ ಆಗ ಬಹಳ ಕಡಿಮೆ. ಹೀಗಾಗಿ ಫ್ರೆಶ್ ಅನಿಸುತ್ತದೆ. ಇನ್ನು ಸಮಯಭಾವದಿಂದ ಅಥವಾ ಇನ್ನಾದರೂ ಅನಿವಾರ್ಯ ಕಾರಣಗಳಿಂದ ಮುಂಜಾನೆ ಅನುಕೂಲ ಆಗದಿದ್ದರೆ ಸಂಜೆ ಸಮಯದಲ್ಲಿ ಆದರೂ ವಾಕಿಂಗ್ ಮಾಡಬಹುದು ಈ ವಾಕಿಂಗ್ ನ್ನು ದಿನಾಲು ಮಾಡಬೇಕು.

ವಾಕಿಂಗ್ ಗಿಂತ ರನ್ನಿಂಗ್ ಓಡುವುದು ಇನ್ನು ಶ್ರೇಷ್ಠವಾದದ್ದು .ಇಲ್ಲಿ ಇನ್ನೊಂದು ವಿಷಯವನ್ನು ಹೇಳಲೇಬೇಕು ಇದು ಸಂಜೆಯ ಊಟವಾದ ನಂತರ ಅತ್ಯವಶ್ಯಕತವಾಗಿ ಮಾಡಬೇಕು ಮತ್ತು ಊಟದ ತಕ್ಷಣ ಮಲಗಬಾರದು ಊಟದ ಕನಿಷ್ಠ ಎರಡು ಗಂಟೆವರೆಗೆ ಎಚ್ಚರವಾಗಿರಬೇಕು. ಸಣ್ಣ ರೌಂಡ್ ವಾಕಿಂಗ್ ಅಂದರೆ ಮನೆ ಮುಂದೆ ಸ್ವಲ್ಪ ಆಚೆ ಈಚೆ ಅಡ್ಡಾಡಬಹುದು

ಪ್ರಯೋಜನಗಳು…. 1.ಧನಾತ್ಮಕವಾದ ಮೆದುಳಿನ ಬದಲಾವಣೆಗಳು ಸಮಗ್ರವಾದ ಮಾನಸಿಕ ಆರೋಗ್ಯ ಲಭಿಸುವುದು ಮಾನಸಿಕ ಒತ್ತಡ ನಿವಾರಣೆಯಾಗುವುದು 2. ಕಣ್ಣಿನ ದೃಷ್ಟಿ ಸುಧಾರಣೆಯಾಗುವುದು ಒಳ ಒತ್ತಡ ಕಡಿಮೆಯಾಗಿ ಗ್ಲುಕೋಮಾ ವಿರುದ್ಧ ಸೆಣಸವ ಶಕ್ತಿ ಲಭ್ಯ 3. ಹೃದಯ ರೋಗವನ್ನು ತಡೆಯುವುದು (ಹಾಟ್ ಸ್ಟ್ರೋಕ್) ಹೃದಯದ ಸ್ತಂಭನ ದೂರ. ರಕ್ತದ ಏರೊತ್ತಡ ಕಡಿಮೆಯಾಗಿ ,ಕೊಲೆಸ್ಟ್ರಾಲ್ ಲೆವೆಲ್ ಕಡಿಮೆಯಾಗಿ ತನ್ಮೂಲಕ ಪರಿಚಲನೆ ಸುಧಾರಿಸುವುದು. 4. ಶ್ವಾಶಕೋಶಗಳ ಗಾತ್ರ ಇಗ್ಗುವುದು ಉಸಿರಾಟದ ಕ್ರಿಯೆ ಉತ್ತಮಗೊಂಡು ದೀರ್ಘ ಉಸಿರಾಟದಿಂದ ಪ್ರಾಣವಾಯುವಿನ ಲಭ್ಯತೆ ಹೆಚ್ಚಾಗಿ ಶ್ವಾಸಕೋಶಗಳ ರೋಗಗಳು ದೂರು, ವಿಷ ವಸ್ತುಗಳ ಹೊರ ಹಾಕುವಿಕೆ ಸರಾಗ ವಾಗುವುದು. 5. ಮೇದೋಜೀರಕ ಗ್ರಂಥಿಯ (ಪ್ಯಾಂಕ್ರಿಯಾಸ್) ಮೇಲಾಗುವ ಪ್ರಯೋಜನಗಳು ಹೆಚ್ಚು ಗ್ಲುಕೋಸ್ ಡಾಲರ್ಸ್ ಹೆಚ್ಚಾಗಿ ಇನ್ಸುಲಿನ್ ಉತ್ಪತ್ತಿ ಸಮರ್ಪಕವಾಗಿ ಸಕ್ಕರೆ ಕಾಯಿಲೆ ಉಪಶಮನಗೊಳ್ಳುತ್ತದೆ. 6. ಪಚನಕ್ರಿಯ ಸುಧಾರಣೆ ಮಲಬದ್ಧತೆ ನಿವಾರಣೆಯಾಗುವುದು. ತನ್ಮೂಲಕ ದೊಡ್ಡ ಕರುಳಿನ ಕ್ಯಾನ್ಸರ್ ಸಂಭವನಿಯತೆ ಕಡಿಮೆಯಾಗುವುದು. ಕರುಳಿನ ಒಳ ಚಲನೆಯ ಪ್ರಕ್ರಿಯ ಸರಳವಾಗಿ ಪಚನ ಕ್ರಿಯೆ ಸಮರ್ಪಕ ವಾಗುವುದು. 7. ಬಲವರ್ದಿತ ಸ್ನಾಯುಗಳು ಮತ್ತು ತೂಕ ಕಮ್ಮಿ (ಓವರ್ವೈಟ್ ಇದ್ದವರಿಗೆ) ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಜಿಮ್ಮಿಗೆ ಹೋಗಿ ಅಥವಾ ಹಳ್ಳಿಯ ನಮ್ಮ ಗ್ರಾಮ್ಯ ಭಾಷೆ ಹೇಳುವುದಾದರೆ ಗರಡಿ ಮನೆಯಲ್ಲಿ (ಮೆಹನತ್) ಪರಿಶ್ರಮ ಮಾಡಿದ ಹಾಗೆ ಇಲ್ಲಿ ದಿನಾಲು ಕನಿಷ್ಠ ಪಕ್ಷ 10,000 ಸ್ಟೆಪ್ಸ್ ಗಳು ಹೆಜ್ಜೆಗಳನ್ನು ವಾಕಿಂಗ್ ಮಾಡಿದರೆ ಖಂಡಿತ ಫಲ ಲಭ್ಯ. ಜೊತೆಗೆ ಗುಡ್ಡ ಅಥವಾ ಬೆಟ್ಟ ಹತ್ತು ಇದ್ದರೆ ಇನ್ನೂ ಶೀಘ್ರ ಫಲ ದೊರೆಯುತ್ತದೆ .

10,000 ಹೆಜ್ಜೆ ಅಂದರೆ ಎಷ್ಟು ದೂರದಲ್ಲಿ ಎರಡು ಹೆಜ್ಜೆಗಳಿಗೆ ಒಂದು ಮೀಟರ್ ಎಂದು ಅಂದಾಜು ಮಾಡೋಣ ಹಾಗಾದ್ರೆ ದಿನಾಲು 10,000 ಹೆಜ್ಜೆಗಳಿಗೆ ಐದು ಕಿಲೋಮೀಟರ್ ವಾಕಿಂಗ್ ಆಗುತ್ತದೆ ಸರಿಯೇ

8. ಗಟ್ಟಿಯಾದ ಎಲುಬುಗಳು ಮತ್ತು ಸಂದುಗಳು : (sturdy bones & joints ) ಅದೇ ವಾಕಿಂಗ್ ಮಾಡುತ್ತಾ ಇರುವವರ ಎಲುಬುಗಳು ಬಲವಿತವಾಗಿರುವುದು ಬೆನ್ನು ನೋವಿನಿಂದ ಮುಕ್ತಿ : (back pain relief) ನಿರಂತರವಾಗಿ ಮಾಡುತ್ತಿದ್ದರೆ ನಿಧಾನವಾಗಿ ಬೆನ್ನು ನೋವಿನಿಂದ ರಿಲೀಫ್ ಕೂಡ ಸಿಗುವುದು ಮತ್ತು ನಿಮ್ಮ ಬೆನ್ನುಹುಳಿಯ ಸ್ಥಿತಿಸ್ಥಾಪಕತ್ವದ ( elasticity-ಇಲಾಸ್ಟಿಸಿಟಿ) ಗುಣ ಹೆಚ್ಚುವುದು.

9.ಮೆದುಳು ಶಾಂತವಾಗಿರುವುದು ಖಿನ್ನತೆ(depression) ಕಡಿಮೆಯಾಗುವುದು ದಿನಾಲು ಏನಿಲ್ಲವೆಂದರೂ ಕನಿಷ್ಠಪಕ್ಷ 30 ನಿಮಿಷಗಳ ವಾಕಿಂಗ್ ಅಂತ ಅವಶ್ಯಕತೆ ಬೇಕು.