ನೀನಿರಲು ಜೊತೆಯಾಗಿ, ಭಯವೇಕೆ ಅಂಬೆ ||ಪ
ಕರೆದೊಡನೆ ಓಡೋಡಿ ಬರುವ, ತಾಯಿ ನೀನಾಗಿಎಲು ||
ಅಂಬಾಭವಾನಿ ಎಂದೊಡನೆ, ಮನವೆಲ್ಲ ಹರುಷದ ಕಡಲು || 1
ನಿನ್ನ ನಾಮಮೃತವು ಸಿಹಿ ಜೇನು,
ನಿನ್ನ ಭಕ್ತರನು ಕಾಯುವ ಕರುಣಿ ನೀನು,
ಕರೆದೊಡನೆ ಬರುವ ಕಾಮಧೇನು,
ಜಗಕ್ಕೆಲ್ಲ ತಾಯಿ ಜಗದಂಬೆ ನೀನು || 2
ನಗುನಗುತ ಉಲ್ಲಾಸದಲಿ ನಡೆದು ಬಾ,
ಸುಖ ಸಂತೋಷವ ಸುರಿಸು ಬಾ,
ಮನದಂಗಳದಿ ಭಕ್ತಿಯ ಹೂವು ಅರಳಿಸು,
ತನುಮನವೆರಡು ನಿನ್ನ ನಾಮದೊಳಿರಿಸು,
ಜಾಹ್ನವಿ ವಿಠ್ಠಲನ ತೋರಿಸು || 3