ಮನೆ ಮನರಂಜನೆ ಗಾಯಕ ಹೇಮಂತ್ ಮನೆಯಲ್ಲಿ ಸೀಮಂತ ಸಂಭ್ರಮ

ಗಾಯಕ ಹೇಮಂತ್ ಮನೆಯಲ್ಲಿ ಸೀಮಂತ ಸಂಭ್ರಮ

0

ಬೆಂಗಳೂರು (Bengaluru)- ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಗಾಯಕ ಹೇಮಂತ್ ಕುಮಾರ್ (Hemanth Kumar) ಅವರ ಪತ್ನಿ ಕೃತಿಕಾ ಅವರ ಸೀಮಂತ ಕಾರ್ಯಕ್ರಮ ಜರುಗಿದೆ.


ಪತ್ನಿಯ ಸೀಮಂತ ಶಾಸ್ತ್ರದ ಫೋಟೋಗಳನ್ನು ಹೇಮಂತದ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
“ನನ್ನ ಮತ್ತು ಕೃತಿಕಾಳ ಕನಸು ಸಾಕಾರಗೊಳ್ಳುವ ಶುಭ ಘಳಿಗೆ ಅತಿ ಶೀಘ್ರದಲ್ಲಿ ಕೂಡಿ ಬರಲಿದೆ. ನಿನ್ನೆ ನಮ್ಮ ಮನೆಯಲ್ಲಿ ಹಿರಿಯರ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಸೀಮಂತ ನಡೆದ ಅಮೃತ ಘಳಿಗೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ” ಎಂದು ಬರೆದುಕೊಂಡಿದ್ದಾರೆ.


ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಹೇಮಂತ್ ಅವರು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ನೆಫ್ರಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೃತಿಕಾ ಅವರನ್ನು ವಿವಾಹವಾಗಿದ್ದರು. ಇದೀಗ ಹೇಮಂತ್ ಕುಮಾರ್ ಹಾಗೂ ಕೃತಿಕಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.