ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಮಗಳು : ಅಮ್ಮ ನಿನ್ನನ್ನು ಬಿಟ್ಟು ಗಂಡನ ಮನೆಗೆ ಹೋಗಬೇಕಲ್ಲಂತ ಅಳು ಬರ್ತಿದೆ.

ತಾಯಿ : ಇದು ಎಲ್ಲ ಹೆಣ್ಣು ಮಕ್ಕಳಿಗೂ ಆಗುವಂಥದ್ದು ಸಮಾಧಾನ ಮಾಡ್ಕೊ.

ಮಗಳು : ಹಾಗಲ್ಲಮ್ಮ ಇಷ್ಟು ದಿನ ಅಪ್ಪನ ಕೈ ಅಡಿಗೆ ರುಚಿಗೆ ಹೊಂದ್ಕೋಂಡಿದ್ದೆ ಇನ್ನು ಮುಂದೆ ಗಂಡ ಹೇಗೆ ಅಡುಗೆ ಮಾಡ್ತಾರೋ ಗೊತ್ತಿಲ್ವಲ್ಲ.

***

ಆತ : ನನ್ನನ್ನು ಲವ್ ಮಾಡೋ ಹುಡುಗೀನ ಯಾವುದಾದರೂ ವಿಷಯಕ್ಕೆ ಒಪ್ಪಿಸಬೇಕಾದರೆ ತುಂಬಾ ಕೇಳಿಕೊಬೇಕು !

ಈತ : ಅದಕ್ಕೆ ಅವಳು prayಯಸಿ ಅನ್ನೋದು..!

***

ಡಾಕ್ಟರ್ : ನೆನ್ನೆ ನಾನು ನಿನಗೆ ಒಂದು ಲವ್ ಲೆಟರ್ ಕೊಟ್ಟೆ, ಏನ್ ಮಾಡ್ದೆ ?

ಗೀತಾ : ಅದು ಮೆಡಿಕಲ್ ಸ್ಟೋರ್ ಗೆ ಕೊಟ್ಟೆ̤

ಡಾಕ್ಟರ್ : ಹೌದೇ, ಅದೇಕಮ್ಮ ಕೊಟ್ಟೆ ?

ಗೀತಾ : ನೀವು ಯಾವುದೋ ಔಷಧಿಗೆ ಬರಕೊಟ್ಟಿದ್ದೀರಿ ಅಂತ ಕೊಟ್ಟೆ.

***

ಶಿಕ್ಷಕ : ರಾಜು ನೀನು ಹೇಳು, ಕೆಂಪೇಗೌಡ ಯಾರು ಅಂತ ?

ರಾಜು : ಸರ್ ,ನಾನು ತಿಳಿದ ಮಟ್ಟಿಗೆ ಕೆಂಪೇಗೌಡ, ದೇವೇಗೌಡರ ಅಣ್ಣ ಇರಬೇಕು.

***

ಕಿಟ್ಟು : ಆ ಗುಂಡನ್ನ ತೆಗಿಬೇಕೂ ಅಂದ್ರೆ ಆ ಬಾಂಬನ್ನು ಅವರ ಕಾರಿಗೆ ಫಿಕ್ಸ್ ಮಾಡ್ಲೇಬೇಕು.

ರಾಜು : ಮಾಡೋದಾದ್ರೆ ಬೇಗ ಮಾಡಿಬಿಡು.

ಕಿಟ್ಟು :ಹೌದು, ಬಾಂಬ್ ಫಿಕ್ಸ್ ಮಾಡುವಾಗ ಅದು ಬ್ಲಾಸ್ಟ್ ಆದ್ರೆ?

ರಾಜಾ : ಅದಕ್ಕೆ ನೀನೇನು ಹೆದರಬೇಡ. ನನ್ನ ಹತ್ರ ಇನ್ನೂ ಎರಡು ಬಾಂಬುಗಳಿವೆ.

***

ರಾಜು : ಸಾರ್ ಆರೋಗ್ಯವಾಗಿದ್ದೀರಾ ?

ಬಾಸ್ : ಲೇ, ಇವರನ್ನೆಲ್ಲ ಮೊದ್ಲು ಹೊರಗಟ್ಟು.

ರಾಜು : ಸರ್, ಅಂತ ಕೆಲಸ ನಾವೇನು ಮಾಡಿದ್ವಿ

ಬಾಸ್ : ನಿನ್ನೆ ನೀವು ಹೂಗುಚ್ಚ ಕೊಟ್ಟು ಹೋದ್ರಲ್ಲ ಅದರಲ್ಲಿ ಏನೂ ಬರೆದಿಟ್ಟಿದ್ರಿ. ?

 ರಾಜು : “ಬೇಗ ಗುಣಮುಖವಾಗಿ” ಅಂತ ಬರೆದಿಟ್ಟಿದ್ವಿ.  

ಬಾಸ್ : “ಸುಖಪ್ರಯಾಣ ಮಾಡಿ” ಅಂತ ಇತ್ತು ಅದ್ರಲ್ಲಿ