ಮನೆ ದೇವಸ್ಥಾನ ಬಸವಕಲ್ಯಾಣ

ಬಸವಕಲ್ಯಾಣ

0

ಬೀದರ್ ಜಿಲ್ಲೆಯ ತಾಲೂಕು ಕೇಂದ್ರ. ಇದೊಂದು ಪುಣ್ಯ ಕ್ಷೇತ್ರ. ಐತಿಹಾಸಿಕವಾಗಿ ಆಧ್ಯಾತ್ಮಿಕವಾಗಿ ಖ್ಯಾತಿವೆತ್ತಿದೆ.  ಹಿಂದೆ ಪೂರ್ವ ಚಾಲುಕ್ಯರ ರಾಜಧಾನಿಯಾಗಿದ್ದು, ಮಿತಾಕ್ಷರ ಎಂಬ ಟೀಕಾಗ್ರಂಥ ಬರೆದ ವಿಜ್ಞಾನೇಶ್ವರ ಈ ಪಟ್ಟಣದ ವೈಭವವನ್ನು ವರ್ಣಿಸಿರುವನು. ಇಂಥ ಪಟ್ಟಣ ನ ಭೂತೋ ನ ಭವಿಷ್ಯತಿ ಎಂದು ಹೇಳಿದರು.

ಚಾಲುಕ್ಯ ವಿಕ್ರಮಾದಿತ್ಯನ ಆಸ್ಥಾನ ಕವಿ ಬಿಲ್ಹಣ ತನ್ನ ವಿಕ್ರಮಾಂಕ ಚರಿತೆಯಲ್ಲಿ ಈ ಪಟ್ಟಣವನ್ನು ವರ್ಣಿಸಿದ್ದಾರೆ. 

ಕ್ರಿ.ಶ. 12ನೇ ಶತಮಾನದಲ್ಲಿ ಕಲ್ಯಾಣ ಖ್ಯಾತಿವೆತ್ತಿತು. ಇಲ್ಲಿ ಒಂದನೆಯ ಸೋಮೇಶ್ವರ, ಎರಡನೇ ಸೋಮೇಶ್ವರ, ಆರನೆಯ ವಿಕ್ರಮಾದಿತ್ಯ, ಮೂರನೇ ಸೋಮೇಶ್ವರ, ಜಗದೇಕಮ, ಮೂರನೇ ತೈಲಪ ಮೊದಲಾದವರು ಆಳಿದರು.  ಕುಲಚುರ್ಯ ಬಿಜ್ಜಳ ಸಹ ಈ ಪಟ್ಟಣವನ್ನ ರಾಜಧಾನಿಯಾಗಿ ಮಾಡಿಕೊಂಡು ಆಳಿದನು. ಆಗಲೇ ಬಸವಾದಿ ಪ್ರಥಮರು ಇಲ್ಲಿ ಧಾರ್ಮಿಕ ಕ್ರಾಂತಿಯನ್ನು ಮಾಡಿದರು. ಜಗಜ್ಯೋತಿಬಸವಣ್ಣನವರು ಬಿಜ್ಜಳನಲ್ಲಿ ಮಂತ್ರಿಯಾಗಿದ್ದರು. ಬಸವೇಶ್ವರರ ಹೆಸರಿನಲ್ಲಿ ಕಲ್ಯಾಣವನ್ನು ಬಸವಕಲ್ಯಾಣ ಎಂದು ಕರೆಯಲಾಯಿತು.

ಪಟ್ಟಣದ ನಡುವೆ ಬಸವೇಶ್ವರರ ಗುಡಿ ಇದೆ. ಪ್ರತಿ ವರ್ಷ ಇದು ದೊಡ್ಡ ಜಾತ್ರೆಯಾಗುತ್ತದೆ. ಕಂಬಳಿ ಮಠ, ಗಜ್ಜಿನ ಮಠ, ಕುಲಕಾಂತಿ ಮಠ, ಸದಾನಂದ ಮಠ ಇಲ್ಲಿನ ಪ್ರಮುಖ ಮಠಗಳು.

ಪುರುಷರ ಕಟ್ಟೆ ಎಂದು ಇಲ್ಲಿ ತೋರಿಸುವರು ಇದರ ಮೇಲೆ ಕುಳಿತು ಬಸವಣ್ಣನ ಭಕ್ತರಿಗೆ ದೀಕ್ಷೆಯನ್ನು ಕೊಟ್ಟು ಉಪದೇಶ ಮಾಡುತ್ತಿದ್ದರಂತೆ.

ತ್ರಿಪುರಾಂತಕ ದೇವಾಲಯ ತ್ರಿಪುರಂಕ ಕೆರೆಯ ಬಳಿ ಇದೆ. ಪಶ್ಚಿಮ ದಂಡೆಯ ಮೇಲೆ, ರುದ್ರಮುನಿಗಳ ಜವಿಯಿದ್ದು. ಇಲ್ಲಿ ಆಚಾರ್ಯ ರೇವಣ್ಣ ಸಿದ್ದರ ಮಗ ರುದ್ರಮುನಿಗಳು ಕಾಲಜ್ಞಾನವನ್ನು ರಚಿಸಿದರು. ಈ ಗದಿಗೆ ಉತ್ತರದಲ್ಲಿ ವಿಜ್ಞಾನೇಶ್ವರ ಗವಿ ಇರುತ್ತದೆ.

ಪ್ರಭುದೇವರ ಗುಡಿ, ಮಡಿವಾಳ ಮಾಚಿದೇವರಗುಡಿ, ಅಕ್ಕ ನಾಗಮ್ಮನವರ ಗವಿ, ನುಲಿಯ ಚಂದ್ರಯ್ಯನವರ ಗವಿ, ಅನುಭವ ಮಂಟಪ ಇಲ್ಲಿನ ಇತರ ಪವಿತ್ರ ಸ್ಥಳಗಳು.