ಮನೆ ಯೋಗಾಸನ ತಾಡಾಸನ (ಪ್ರತಿನಾಮ-ಸಮಸ್ಥತಿ)

ತಾಡಾಸನ (ಪ್ರತಿನಾಮ-ಸಮಸ್ಥತಿ)

0

ʼತಾಡʼ ಎಂದರೆ ಪರ್ವತ. ʼಸಮʼ = ನೆಟ್ಟನಿಲುವು. ನೇರ ಮತ್ತು ನಿಶ್ಚಲ (ಕದಲದೆ ನಿಲ್ಲುವುದು) ʼಸ್ಥಿತʼ = ಸ್ವಲ್ಪವೂ ಅಲುಗಾಡದೆ ದೇಹವನ್ನು ನೆಟ್ಟಗೆ ನಿಲ್ಲಿಸುವ ಭಂಗಿ. ಇದೇ ದೇಹದ ನಿಲುವು – ಭಂಗಿಗಳಿಗೆ ತಳಹದಿ.

ಅಭ್ಯಾಸ ಕ್ರಮ :-

೧. ಮೊದಲು ಹಿಮ್ಮಡಿಗಳನ್ನೂ ಕಾಲಿನುಗುಂಟ (ಹೆಬ್ಬೆರಳು) ವನ್ನೂ ಪರಸ್ಪರ ತಾಗುವಂತೆ ಎರಡು ಪಾದಗಳನ್ನು ಜೋಡಿಸಿ ನೇರವಾಗಿ ನಿಲ್ಲಬೇಕು.

೨. ಬಳಿಕ ಮಂಡಿಗಳನ್ನು ಬಿಗಿಮಾಡಿ, ಮಂಡಿಚಿಪ್ಪುಗಳನ್ನು ಮೇಲೆಳೆದು ಪೃಷ್ಟಗಳನ್ನು ಕುಗ್ಗಿಸಿ, ತೊಡೆಗಳ ಹಿಂದಿನಿಂದ ಮಾಂಸ ಕಂಡಗಳನ್ನು ಮೇಲಕ್ಕೆ ಸೆಳೆದಿರಬೇಕು.

೩. ಆಮೇಲೆ ಹೊಟ್ಟೆಯನ್ನು ಒಳಕ್ಕೆ ಸೆಳೆದುಕೊಂಡು, ಎದೆಯ ಭಾಗವನ್ನು ಮುಂದೂಡಿ, ಬೆನ್ನಲುಬನ್ನು ಮೇಲಕ್ಕೆ ಹಿಗ್ಗಿಸಿ, ಕತ್ತನ್ನು ನೇರವಾಗಿಸಿ ನಿಲ್ಲಬೇಕು. 

೪. ಅನಂತರ ದೇಹದ ಭಾರವನ್ನೆಲ್ಲ ಹಿಮ್ಮಡಿಗಳಿಗೆ, ಇಲ್ಲವೇ ಕಾಲ ಹೆಬ್ಬೆರಳುಗಳಿಗೆ ಪ್ರತ್ಯೇಕವಾಗಿ ಹೊರಿಸದೆ, ಅದನ್ನ ಇವೆರಡಕ್ಕೂ ಸಮವಾಗಿ ಹಂಚಬೇಕು.  

೫. ಈ ಆಸನದಲ್ಲಿ ಎರಡು ತೋಳುಗಳನ್ನು ನೇರವಾಗಿ ಎತ್ತಿ ಹಿಡಿಯುವುದು ಅತ್ಯುತ್ತಮ. ಆದರೆ ಸೌಕರ್ಯಕ್ಕಾಗಿ ಅವುಗಳನ್ನು ನೀಳವಾಗಿ ಚಾಚಿ, ತೊಡೆಗಳ ಬದಿಯಲ್ಲಿ ಸಮಾನಾಂತರವಾಗಿರಬಹುದು. ಅಭ್ಯಾಸಿಯು ತಡಸನದಲ್ಲಿ ಕೈಗಳನ್ನ ತೊಡೆಗಳ ಬದಿಯಲ್ಲಿರಿಸಿ ನಿಂತುಕೊಳ್ಳುವ ಬಂಗಿಯಿಂದ ಪ್ರಾರಂಭಿಸಿದುದೇ ಆದರೆ, ಈ ಮುಂದೆ ವಿವರಿಸುವ ನಿಲುವು ಭಂಗಿಗಳನ್ನೆಲ್ಲ ಬಹು ಸುಲಭವಾಗಿ ಸಾಧಿಸಬಹುದು.

ಪರಿಣಾಮಗಳು :-

ಸಾಮಾನ್ಯವಾಗಿ ಜನರು ತಾವು ಸರಿಯಾಗಿ ನಿಲ್ಲಬೇಕಾದ ಕ್ರಮದ ಕಡೆಗೆ ಗಮನಕೊಡರು. ಕೆಲವರು ತಮ್ಮ ದೇಹ ಭಾರವನ್ನು ಒಂದೇ ಕಾಲಿಗೆ ವಹಿಸಿಯೋ, ಇಲ್ಲವೇ ಒಂದು ಕಾಲನ್ನ ಪಕ್ಕಕ್ಕೆ ತಿರುಗಿಸಿ ನಿಲ್ಲುತ್ತಾರೆ. ಮತ್ತೆ ಕೆಲವರು ದೇಹದ ಹೊರೆಯನ್ನು ಹಿಮ್ಮಡಿಗಳಿಗೂ ಪಾದಗಳ ಹಂಚಿಗೆ ಇಲ್ಲವೇ ಹೊರ ಹಂಚಿಗೆ ಅಳವಡಿಸಿ ನಿಲ್ಲುವುದುಂಟು. ಅವರು ಹಾಕಿಕೊಳ್ಳುವ ಪಾದರಕ್ಷೆಗಳ ಸವೆತದೆ ತಪ್ಪು ರೀತಿಯಲ್ಲಿ ನೀವು ಶರೀರದ ಹೊರೆಯನ್ನು ಪಾದಗಳ ಎರಡಕ್ಕೂ ಸಮನಾಗಿ ಹಂಚದೇ ನಿಲ್ಲುವ ಪರಿಣಾಮದಿಂದ ಅವರ ನಿರ್ದಿಷ್ಟವಾದ ಕೆಲವು ಬಗೆಯ ವಕ್ರ ಸ್ಥಿತಿಯನ್ನುಗಳಿಸಿ, ಈ ಮೂಲಕ ಬೆನ್ನೆಲುಬಿನ ಸ್ಥಿತಿಸ್ಥಾಪಕತ್ವಕ್ಕೆ ಧಕ್ಕೆಯನ್ನು ತಂದುಕೊಳ್ಳುತ್ತಾರೆ.     ಪಾದಗಳನ್ನು ಅಗಲಿಸಿಟ್ಟರೆ ಹಿಮ್ಮಡಿ ಮತ್ತು ಉಂಗುಟಗಳನ್ನು ಪಾದಗಳ ಮಧ್ಯರೇಖೆಗೆ ಸಮಾನಾಂತರವಾಗಿಸಿ ನಿಲ್ಲುವುದು ಸರಿಯಾದದ್ದು ಓರೆಯಾಗಿ ಇಡುವುದು ಸರಿಯಲ್ಲ. ಈ ಕ್ರಮವನ್ನು ಅನುಸರಿಸದೆ ಪೃಷ್ಟಗಳು ತಾವಾಗಿಯೇ ಕುಗ್ಗುತ್ತದೆ, ಅಲ್ಲದೆ ಹೊಟ್ಟೆಯು ಹಿಂದೆ ಸರಿದು, ಎದೆಯ ಮುಂದಕ್ಕೆ ಬರುತ್ತದೆ. ಹಗುರವಾಗುತ್ತದೆ ಮತ್ತು ಮನಸ್ಸಿಗೆ ಲವಲವಿಕೆ ಉಂಟಾಗುತ್ತದೆ. ಈ ಕ್ರಮವನ್ನನುರಿಸದೆ ದೇಹದ ಹೊರೆಯನ್ನೆಲ್ಲ ಹಿಮ್ಮಡಿಗಳಿಗೆ ಹೋರಿಸಿದರೆ  ಗುರುತ್ವಾಕರ್ಷಣೆ ಕೇಂದ್ರ ವ್ಯತ್ಯಾಸವಾಗಿರುವುದು ನಮ್ಮ ಅನುಭವಕ್ಕೆ ಬರುತ್ತದೆ. ಅಲ್ಲದೆ ಟೋಕಗಳು ಸಡಿಲಗೊಳ್ಳುತ್ತದೆ. ಹೊಟ್ಟೆ ಮುಂದಕ್ಕೆ ಬರುತ್ತದೆ. ಇದರಿಂದ ದೇಹವು ಹಿಂಭಾಗೋವ ಸಂಭವವು ಉಂಟು. ಆಗ ಬೆನ್ನೆಲುಬಿಗೆ ಕೆಲಸ ಹೆಚ್ಚು. ಇದರ ಪರಿಣಾಮವೆಂದರೆ ಬಲು ಬೇಗ ಆಯಾಸ ಮತ್ತು ಬುದ್ಧಿಗೆ ಮಾಂದ್ಯ. ಈ ಮೇಲಿನ ಕಾರಣಗಳಿಂದ ಸರಿಯಾಗಿ ನಿಲ್ಲುವ ಭಂಗಿಯನ್ನುಅಭ್ಯಸಿಸಿ, ಆ ಮೂಲಕ ಸತ್ಪಲವನ್ನು ಗಳಿಸಬಹುದು.