ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವಕೀಲ : ರಾಜು, ನಿನ್ನ ಹೊಡೆದ ವ್ಯಕ್ತಿಯನ್ನು ಈಗ ಗುರುತಿಸಬಲ್ಲೆಯಾ ?

ರಾಜು : ಖಂಡಿತ ಗುರುತಿಸಬಲ್ಲೆ

ವಕೀಲ : ಹೇಳುವ ವ್ಯಕ್ತಿ ಹೇಗಿದ್ದ

ರಾಜು : ಆತ ಬೆಳ್ಳಗಿದ್ದ, ಗಿಡ್ಡವಾಗಿದ್ದ, ಮೀಸೆ ಬಿಟ್ಟಿದ್ದ, ಗಡ್ಡ ಉದ್ದ ಬೆಳೆದಿತ್ತು.

ವಕೀಲ : ಆ ವ್ಯಕ್ತಿ ಗಂಡು-ಹೆಣ್ಣು ಸರಿಯಾಗಿ ಯೋಚಿಸಿ ಹೇಳು.

***

ರಾಜು : ಡಾಕ್ಟರೆ ಏಕೋ ನನಗೆ ತುಂಬಾ ಹೊಟ್ಟೆ ನೋವು

ಡಾಕ್ಟರ್ : ನೆನ್ನೆ ರಾತ್ರಿ ಏನ್ ತಿಂದೆ ರಾಜು ?

ರಾಜು : ಕೋಳಿ ಮೊಟ್ಟೆ.

ಡಾಕ್ಟರ್ : ಸರಿ ನಿನ್ನ ಕಾವಿಗೆ ಮೊಟ್ಟೆ ಒಡೆದು ಮರಿಯಾಗಿರಬೇಕು. ಅದಕ್ಕೆ ನಿನಗೆ ಹೊಟ್ಟೆ ನೋವು.

***

ಪೊಲೀಸ್ : ಏ! ಏ! ಕಾರು ನಿಲ್ಸೋ ?

ರಾಜು : ಏಕೆ ಸರ್ ?

ಪೊಲೀಸ್ :  ಹೀಗೆ ಸಿಕ್ಕಾಪಟ್ಟೆ ಓಡುಸ್ತಾ ಇದ್ದೀಯ, ಮತ್ತೆ ಏಕಂತ ಕೇಳ್ತಿಯಲ್ಲ?

ರಾಜು : ನಾನು ಈಗ ಕಾರ್ ಡ್ರೈವಿಂಗ್ ಕಲೀತಾ ಇರೋದು.

 ಪೊಲೀಸ್ : ಹೇಳಿ ಕೊಡೋಕೆ ಇನ್ಸ್ಪೆಕ್ಟರ್ ಇರಬೇಕಲ್ಲ.

ರಾಜು : ಇದು ಕರೆನ್ಸಿಪಾಂಡೆನ್ಸ್ ಕೋರ್ಸ್.