ಲಕ್ಷ್ಮಿ ಬಂದಳೆ ನಮ್ಮ ಮನೆಗೆ
ಮೆಲ್ಲ ಮೆಲ್ಲನೆ ಕಾಲ್ಗೆಜ್ಜೆ ಸಪ್ಪಳ ಮಾಡುತ
ಸಿಂದೂ ಸುತೆ ಇಂದು ನಮ್ಮ ಮನೆಗೆ
ಲಕ್ಷ್ಮಿ ಬಂದಳೆ ನಮ್ಮ ಮನೆಗೆ || ಪ
ಹೊಸ ಬೆಣ್ಣೆಯ ತೆರೆದಂತೆ
ಹಸುವಿನ ಕರೆದ ನೊರೆ ಹಾಲಿನಂತೆ
ಅರಳಿದ ಮಲ್ಲಿಗೆಯ ಪರಿಮಳ
ಸೂಸುತ ಮೆಲ್ಲನೆ ನಡೆದು ಬಂದಳೆ
ಲಕ್ಷ್ಮಿ ಬಂದಳೆ ನಮ್ಮ ಮನೆಗೆ || 1
ಹಸಿರು ಪೀತಾಂಬರವ ದರಿಸಿ
ವಂಕಿ ವಡ್ಯಾಣದಿಂದ ಶೋಭಿಸಿ
ಕ್ಷೀರಸಾಗರ ಕನ್ನಿಕೆ ಸಿರಿದೇವಿ ಸಿ
ರಿಯನ್ನು ತುಂಬುತ…..
ಲಕ್ಷ್ಮಿ ಬಂದಳೆ ನಮ್ಮ ಮನೆಗೆ || 2
ಎಡ ಬಲದಲಿ ಗಜಗಳು
ಕೊಡದ ತುಂಬಾ ಮುತ್ತು ಮಾಣಿಕ್ಯಗಳು
ಹೊತ್ತು ತಂದಳು ಸಿರಿದೇವಿ ಕಲ್ಯಾಣ
ಜಾಹ್ನವಿ ವಿಠಲನ ಪ್ರೇಮದ ರಾಣಿ
ಲಕ್ಷ್ಮೀ ಬಂದಳೆ ನಮ್ಮ ಮನೆಗೆ || 3