ಮನೆ ಅಪರಾಧ ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆ ಬಂಧನ

ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆ ಬಂಧನ

0

ಬೆಂಗಳೂರು: ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೆಲಸದಾಕೆಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಎನ್‌ಜಿಒಎಸ್ ಕಾಲೊನಿ ನಿವಾಸಿ ಉಷಾ (43) ಬಂಧಿತ ಮಹಿಳೆ.

ಆರೋ‍ಪಿಯಿಂದ ₹4 ಲಕ್ಷ ಮೌಲ್ಯದ 66 ಗ್ರಾಂ ಚಿನ್ನ ಮತ್ತು 155 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಎನ್‌ಎಚ್‌ಸಿಎಸ್ ಲೇಔಟ್‌ನಲ್ಲಿ ವಾಸವಾಗಿರುವ ಛಾಯಾಸಿಂಗ್ ಅವರ ತಾಯಿ ಚಮನ್ ಲತಾ ಸಿಂಗ್ ಮನೆಯಲ್ಲಿ 2 ವರ್ಷಗಳಿಂದ ಆರೋಪಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಹಂತ-ಹಂತವಾಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಳು ಎಂದು ಪೊಲೀಸರು ಹೇಳಿದರು.

ಮನೆ ಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿ ಚಮನ್‌ ಲತಾಸಿಂಗ್‌ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಸಾಲ ತೀರಿಸುವ ಸಲುವಾಗಿ ಮಾಲೀಕರ ಮನೆಯಲ್ಲಿ ಆಭರಣ ಮತ್ತು ಹಣ ಕಳವು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ ಜಪ್ತಿ ಮಾಡಿದ್ದ ಆಭರಣವನ್ನು ನಟಿ ಛಾಯಾಸಿಂಗ್ ಅವರಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಮಂಗಳವಾರ ಮರಳಿಸಿದರು.

ಹಿಂದಿನ ಲೇಖನಅಂದರ್-ಬಾಹರ್ ಆಡುತ್ತಿದ್ದ 27 ಜೂಜುಕೋರರು ವಶಕ್ಕೆ: 3.15 ಲಕ್ಷ ನಗದು ವಶ
ಮುಂದಿನ ಲೇಖನನಕಲಿ ಕೀ ಬಳಸಿ ಮನೆಯಲ್ಲಿ ಚಿನ್ನಾಭರಣ ಕಳವು: ಆರೋಪಿ ಬಂಧನ