ಮನೆ ಅಪರಾಧ ಕೆಇಎ ಪರೀಕ್ಷಾ ಅಕ್ರಮ: ತನಿಖೆಗೆ ಸಿಐಡಿ ಅಧಿಕಾರಿಗಳಿಗೆ ಕಡತ ಹಸ್ತಾಂತರ

ಕೆಇಎ ಪರೀಕ್ಷಾ ಅಕ್ರಮ: ತನಿಖೆಗೆ ಸಿಐಡಿ ಅಧಿಕಾರಿಗಳಿಗೆ ಕಡತ ಹಸ್ತಾಂತರ

0

ಯಾದಗಿರಿ: ಕೆಇಎ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ ಪ್ರಕರಣದ ತನಿಖೆಯನ್ನು ಶನಿವಾರ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.

ಗೃಹ ಇಲಾಖೆಯ ಸೂಚನೆ ಮೇರೆಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹೀತೇಂದ್ರ ಸಿಐಡಿ ತನಿಖಾಧಿಕಾರಿಗೆ ಪ್ರಕರಣದ ಕಡತಗಳನ್ನು ಹಸ್ತಾಂತರ ಮಾಡಿದ್ದಾರೆ.

ಆರ್​.ಡಿ ಪಾಟೀಲ್ ಬಂಧನ

ಕೆಇಎ ಪರೀಕ್ಷೆ ಅಕ್ರಮ ಆರೋಪಿ ಕಿಂಗ್ ​ಪಿನ್​ ಆರ್​.ಡಿ ಪಾಟೀಲ್​ ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಲಾಡ್ಜ್ ನಲ್ಲಿದ್ದ ರುದ್ರಗೌಡನನ್ನು ಪತ್ತೆ ಮಾಡಿ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಆತನನ್ನು ಬಂಧಿಸಿ ಕಲಬುರಗಿಗೆ ತರಲಾಗಿದೆ.