ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನಾಲ್ಕು ಇರುವೆಗಳು ಬರುತ್ತಿದ್ದವು. ಎದುರಿಗೆ ಒಂದು ಆನೆ ಬಂತು.

ಒಂದನೇ ಇರುವೆ : ಇವನಿಗೆ ಮಹಾ ಸೊಕ್ಕು ಇವನ ಕಾಲು ಮುರಿದು ಬಿಡೋಣ.

ಎರಡನೇ ಇರುವೆ : ಇವನ ಸೊಂಡಿಲು ಕಿತ್ತುಹಾಕೋಣ.

ಮೂರನೇ ಇರುವೆ : ಅವನನ್ನ ಕೊಂದೇಬಿಡೋಣ.

ನಾಲ್ಕನೇ ಇರುವೆ : ಬಿಡ್ರೋ ಪಾಪ, ಒಬ್ಬನೇ ಇದ್ದಾನೆ, ಬದುಕಿಕೊಳ್ಳಲಿ.

***

ರಾಜು : ಬೇಗ ನನ್ನ ಕಾಯಿಲೆ ಗುಣಪಡಿಸಿ ಡಾಕ್ಟ್ರೇ.

ಡಾಕ್ಟರ್ : ಏಕೆ ? ಎಲ್ಲಿಗೆ ಹೋಗ್ಬೇಕು ?

ರಾಜು : ನಾನು ತುಂಬಾ ವರ್ಷ ಬದುಕಬೇಕು ಅಂತ ಆಸೆ. ಅಂದಹಾಗೆ ತುಂಬಾ ವರ್ಷ ಬದುಕಲು ನಿಮ್ಮ ಹತ್ರ ಏನಾದರು ಔಷದ ಇದೆಯೇ ಡಾಕ್ಟರೇ.

ಡಾಕ್ಟರ್ : ಔಷದಿ ಇಲ್ಲ. ಒಂದು ಉಪಾಯ ಹೇಳ್ತೀನಿ. ಬೇಗ ಮದುವೆಯಾಗ್ಬಿಡಿ.

ರಾಜು : ಅಂದ್ರೆ ಮದುವೆ ಆದರೆ ಬಹಳ ವರ್ಷ ಬದುಕಬಹುದೇ ?

ಡಾಕ್ಟರ್ : ತುಂಬಾ ವರ್ಷ ಬದುಕಬೇಕೆಂಬ ನಿಮ್ಮಾಸೆ ಹೋಗಿಬಿಡುತ್ತೆ.

***

ಬಾಸ್ : ರಾಜು ಹೋಗಿ ಇದೇ ರೀತಿ 10ವೈಟ್ ಪೇಪರ್ ತಗೊಂಡು ಬಾ.

ರಾಜು : ಆಯ್ತು ಬಾಸ್, ಶಾಂಪಲ್ಲಿಗೆ ಒಂದು ವೈಟ್ ಶೀಟ್ ಕೊಟ್ಟಿರಿ.

ಬಾಸ್ :ತಗೋ ಬೇಗ ಬಾ.

ರಾಜು : ತಗೊಳ್ಳಿ ಬಾಸ್ 10 ಷೀಟು ರೆಡಿ.

ಬಾಸ್ : ಅರೆ ಇಲ್ಲೆಲ್ಲೂ ಬುಕ್ ಸ್ಟಾಲುಗಳೇ ಇಲ್ಲ. ಹೇಗೆ ತಂದೆ?

ರಾಜು : ವೆರಿ ಸಿಂಪಲ್ ಬಾಸ್, ನೀವು ಕೊಟ್ಟ ಖಾಲಿ ಹಾಳೇನೇ 9 ಜರಾಕ್ಸ್ ಮಾಡಿಸಿದೆ.