ಮನೆ ದೇವರನಾಮ ಕೂಗಿ ಕರೆದೇನೋ ನಿನ್ನ

ಕೂಗಿ ಕರೆದೇನೋ ನಿನ್ನ

0

ಕಾವೇರಿ ರಂಗ ಕೂಗಿ ಕರೆದೇನೋ ನಿನ್ನ |

ಎನಗಾರಿಲ್ಲವೆಂದು ನಿನ್ನ….

ಕಾವೇರಿ ರಂಗ || ಪ

ಶೇಷಗಿರಿಯಲ್ಲಿ ನಿನ್ನಯ ವಾಸ….

ಭಕ್ತರ ಹೃದಯದ ಮಂದಿರದಿ ಸಹವಾಸ

ಎಡಬಿಡದೆ ನಿನ್ನ ಭಜಿಸುವೆ ಲಕ್ಷ್ಮೀ ರಮಣ

ತಡಮಾಡದಲೇ ಬಾರೋ ನಾರಾಯಣ || 1

ಹಣ ಹೊನ್ನು ದ್ರವ್ಯಗಳು ಏಕೆ ಬೇಕಂತೆ

ನೀನಿರುವಾಗ ಕಲ್ಪತರು ಕಾಮಧೇನುವಿನಂತಿ

ಸಿರಿಯೊಲಿದು ಬರುವಳು ನಿನ್ನ ಜೊತೆಯಲ್ಲಿ

ಧರಣಿಯ ಪಾಲಕಳಾಗಿಸುವಳು ಕರುಣಾದಲ್ಲಿ || 2

ಬೇಡುವೆ ನಿನ್ನೊಲುಮೆಯು ದಿನ ದಿನವು

ದೂಡುತ ಸಾಗಿಸು ಬಾಳ ನೌಕೆಯು

ಹಸನಾದ ಬದುಕಿಗೆ ನಿನ್ನ ಸ್ಮರಣೆಯು

ಜಹ್ನವಿ ವಿಠಲನೆಂಬ ಶುಭ ನಾಮವು ||3