ಬೆಂಗಳೂರು(Bengaluru): ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುಂಡರಗಿಯ ಶಂಕರಪ್ಪ ಎಂಬ ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಏಳು ವರ್ಷಗಳ ಶಿಕ್ಷೆಯನ್ನು, ಹೈಕೋರ್ಟ್ ಹತ್ತು ವರ್ಷಕ್ಕೆ ಹೆಚ್ಚಿಸಿದೆ.
ಶಿಕ್ಷೆ ಹೆಚ್ಚಳಕ್ಕೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ಪೀಠದ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಮತ್ತು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್ ಅವರಿದ್ದ ವಿಭಾ ಗೀಯ ನ್ಯಾಯಪೀಠ ಮಾನ್ಯ ಮಾಡಿದೆ.
ವಿಚಾರಣಾ ನ್ಯಾಯಾಲ ಯವು ಪೋಕ್ಸೊ ಕಾಯ್ದೆಯ ಕಲಂ 42 ಅನ್ನು ಆಧರಿಸಿ ಕೇವಲ ಏಳು ವರ್ಷಗಳ ಶಿಕ್ಷೆ ನೀಡಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಪೋಕ್ಸೊ ಕಾಯ್ದೆ ಕಲಂ 6 376(2)(1) ಅನ್ವಯ 10 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.