ಮನೆ ಕಾನೂನು ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದ ಮೂರು ಟಿಪ್ಪ‌ರ್ ವಶ: 1.74 ಲಕ್ಷ  ರೂ. ದಂಡ

ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದ ಮೂರು ಟಿಪ್ಪ‌ರ್ ವಶ: 1.74 ಲಕ್ಷ  ರೂ. ದಂಡ

0

ಗುಂಡ್ಲುಪೇಟೆ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು  ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದ ಮೂರು ಟಿಪ್ಪ‌ರ್ ಗಳನ್ನ ವಶಪಡಿಸಿಕೊಂಡು 1.74 ಲಕ್ಷ  ರೂ. ದಂಡ ವಿಧಿಸಿದ್ದಾರೆ.

ರಜಾ ದಿನವೂ ಕಾರ್ಯಚರಣೆಗಿಳಿದ ಡಿಡಿ ಪದ್ಮಾಜಾ ಅವರು ಅಕ್ರಮ ದಂಧೆಕೊರರಿಗೆ ಬಿಸಿ ಮುಟ್ಟಿಸಿದ್ದಾರೆ. ಗುಂಡ್ಲುಪೇಟೆ ಪರ್ಮಿಟ್ ಇಲ್ಲದೆ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್‌ ಗಳ ಮೇಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜಾ ಅವರು ದಾಳಿ ನಡೆಸಿದ್ದಾರೆ. ರಾಜಪ್ಪ, ಪ್ರಭಾಕರ್, ಸೆಲ್ವಕುಮಾರ್‌ ಗೆ ಸೇರಿದ ಮೂರು ಟಿಪ್ಪರ್ ಗಳನ್ನು ವಶಕ್ಕೆ ಪಡೆಯಲಾಗಿದೆ.