ಮನೆ ಕಾನೂನು ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ್ದ ಅಣ್ಣನಿಗೆ 25 ಸಾವಿರ ರೂ. ದಂಡ

ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ್ದ ಅಣ್ಣನಿಗೆ 25 ಸಾವಿರ ರೂ. ದಂಡ

0

ಬಾಗಲಕೋಟೆ: ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ್ದ ಅಣ್ಣನಿಗೆ ಜಿಲ್ಲೆಯ ಜಮಖಂಡಿ ಜೆಎಂಎಫ್ ​ಸಿ ಕೋರ್ಟ್ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಅಪ್ರಾಪ್ತ ಸಹೋದರನಿಗೆ ಬೈಕ್ ಚಲಾಯಿಸಲು ನೀಡಿದ್ದ ತಪ್ಪಿಗೆ ಸಚಿನ್ ರಮೇಶ್ ರಾಠೋಡ್ ​ಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಹುಲ್ಯಾಳದಿಂದ ಜಮಖಂಡಿಗೆ ಬರುವಾಗ ಬೈಕ್ ನೀಡಿದ್ದಾನೆ.

ಈ ವೇಳೆ ಮಾರ್ಗಮಧ್ಯೆ ವಾಹನ ತಪಾಸಣೆ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಫೆಬ್ರವರಿ 23ರಂದು ಜಮಖಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಆರೋಪದಡಿ ಕೇಸ್ ದಾಖಲಿಸಲಾಗಿದ್ದು, ಬೈಕ್ ಮಾಲೀಕ ಸಚಿನ್ ​ಗೆ 25,000 ರೂ. ದಂಡ ವಿಧಿಸಿದೆ.