ಮನೆ ಅಪರಾಧ ಬಳ್ಳಾರಿ: ಒಂದೇ ಏರಿಯಾದಲ್ಲಿ ಸರಣಿ ಕಳ್ಳತನ

ಬಳ್ಳಾರಿ: ಒಂದೇ ಏರಿಯಾದಲ್ಲಿ ಸರಣಿ ಕಳ್ಳತನ

0

ಬಳ್ಳಾರಿ: ಇಲ್ಲಿನ ಕುವೆಂಪು ನಗರದಲ್ಲಿ ತಡರಾತ್ರಿ ಮನೆ ಬೀಗ ಮುರಿದು ಒಂದೇ ಏರಿಯಾದಲ್ಲಿ ಸರಣಿ ಕಳ್ಳತನವಾಗಿದೆ.

ಮೂರು ಮನೆಯಲ್ಲಿ ಕಳ್ಳತನಕ್ಕೆ ಯತ್ನವಾಗಿದ್ದು, ಐದು ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಬೆಳ್ಳಿ -ಬಂಗಾರ ಸೇರಿದಂತೆ ಹಣ ಕದ್ದು ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳರು ಕೈಚಳಕ ತೋರಿದ್ದಾರೆ.

ಪ್ರಕಾಶ್ ಎಂಬುವವರು ಮನೆಯಲ್ಲಿ ಸುಮಾರು 2 ಲಕ್ಷ 50 ಸಾವಿರ ಹಣ ಹಾಗೂ ನಾಲ್ಕು ತೊಲೆ ಬಂಗಾರ ಕಳವಾಗಿದೆ. ಐದು ಮನೆಯಲ್ಲಿ ಒಟ್ಟು 10 ತೊಲೆ ಬಂಗಾರ 9 ಲಕ್ಷಕ್ಕೂ ಅಧಿಕ ಹಣ ಕದ್ದು ಪರಾರಿಯಾಗಿದ್ದಾರೆ.

ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.