ಮನೆ ದೇವರ ನಾಮ ಬರಬೇಕು ಸ್ವಾಮಿ

ಬರಬೇಕು ಸ್ವಾಮಿ

0

     ಬರಬೇಕು ಸ್ವಾಮಿ ಬರಬೇಕು

    ಇಂದು ಮುದದಿಂದ ಮನೆಗೆ ನೀ ಬರಬೇಕು||

 ಒಲವಿಂದ ವರಗಳನು ತರಬೇಕೂ|

 ಬರಬೇಕು ಸ್ವಾಮಿ ಬರಬೇಕು

 ಇಂದು ಮುದದಿಂದ ಮನೆಗೆ ನೀ ಬರಬೇಕು||

 ಮಲ್ಲಿಗೆಯ ಜಾಜಿ ಸಂಪಿಗೆಯ

 ಹೂವ ಮಾಲೆಯನ್ನು ನೀಡುವೆನು ಗಣಪತಿಯೆ||

 ಗರಿಕೆ ಹುಲ್ಲನು ಪತ್ರದೆಲೆಯನು

 ಪೂಜಿಸುವೆ ಸ್ವಾಮಿ ನಿನ್ನ ಪಾದಗಳಿಗೆ|| ಬರಬೇಕು||

 ಚಕ್ಕುಲಿಯ ಬೆಲ್ಲ ಮೋದಕವ

 ನಾ ನೈವೇದ್ಯ ನೀಡುವೆನು ಪ್ರಭು ನಿನಗೆ||

 ಏಕಾರತಿ ಪಂಚಾರತಿ ದಿವ್ಯಾರತಿ ಬೆಳಗುವೆನು||

 ಏ ವಿನಾಯಕ ನೀನು ಒಲಿಯೋ ನಮಗೆ ||ಬರಬೇಕು||

 ಭಕ್ತಿಯಲಿ ನಿನ್ನ ಅರ್ಚಿಸುವೆ

 ನಾ ಮಂತ್ರ ಪುಷ್ಪ ನೀಡುವೆನು ಗಣಪತಿಗೆ||

ಸಾಷ್ಟಾಂಗ ನಮಸ್ಕಾರ ಮಾಡುವೆನು ಬೆನಕನಿಗೆ  ||

 ಸ್ವೀಕಾರ ಮಾಡು ನೀ ಬಂದು ನಮ್ಮನೆಗೆ || ಬರಬೇಕು ||