ಮನೆ ದೇವರನಾಮ ನಿನ್ನ ನುಡಿಗಳು ನನಗೆ ವೇದದಂತೆ |

ನಿನ್ನ ನುಡಿಗಳು ನನಗೆ ವೇದದಂತೆ |

0

 ನಿನ್ನ ಸ್ಮರಣೆಯೆ ಶಿವನ ಮಂತ್ರದಂತೆ |

 ಸಿದ್ದಲಿಂಗೇಶ್ವರ ಸಿದ್ದಲಿಂಗೇಶ್ವರ ||

 ಎಂದಾಗ ಬದುಕು ಸಾರ್ಥಕವಾದಂತೆ ||ನಿನ್ನ||

 ಮಣ್ಣೆಲ್ಲ ಮೃತ್ತಿಗೆಯು ಕಲ್ಲೆಲ್ಲ ಪರುಷಮಣಿ   

 ಪಾದ ಸೋಕಿದಾಗ ನಿನ್ನ ಪಾದ ಸೋಕಿದಾಗ ||

 ನದಿಯೆಲ್ಲ ಗಂಗೆಯಂತೆ ಹನಿಯು ತೀರ್ಥದಂತೆ  ||

 ಕರವು ಸೋಕಿದಾಗ ನಿನ್ನ ಕರವು ಸೋಕಿದಾಗ ||ನಿನ್ನ ||

 ಕಾಡಾಗಲಿ ನಾಡಗಲಿ ಕೈಲಾಸ ವಾಗುವುದು

 ನೀನು ನೆಲೆಸಿದಾಗ ಅಲ್ಲಿ ನೀನು ನೆಲೆಸಿದಾಗ ||

 ಹರನನ್ನು ನಂಬದವ ಶಿವನನ್ನು ಕಾಣುವನು ||

 ನೀನು ಹರಿಸಿದಾಗ ತಂದೆ ನೀನು ಹರಸಿದಾಗ |ನಿನ್ನ