ಮನೆ ಕಾನೂನು ಶಿವಮೊಗ್ಗ: ತಳ್ಳುಗಾಡಿ ವ್ಯಾಪಾರಿಗೆ ಪೊಲೀಸ್ ಪೇದೆ ಹಲ್ಲೆ ಪ್ರಕರಣದ ವಿಡಿಯೋ ವೈರಲ್

ಶಿವಮೊಗ್ಗ: ತಳ್ಳುಗಾಡಿ ವ್ಯಾಪಾರಿಗೆ ಪೊಲೀಸ್ ಪೇದೆ ಹಲ್ಲೆ ಪ್ರಕರಣದ ವಿಡಿಯೋ ವೈರಲ್

0

ಶಿವಮೊಗ್ಗ: ಗಾಂಧಿ ಬಜಾರ್‌ನ ತಳ್ಳುಗಾಡಿ ವ್ಯಾಪಾರಿಗೆ ಟ್ರಾಫಿಕ್ ಪೊಲೀಸ್ ಪೇದೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಸೋಮವಾರ ಸಂಜೆ ಕೆಲಕಾಲ ಗಲಾಟೆ, ಗದ್ದಲ ಏರ್ಪಟಿತ್ತು. ಘಟನೆ ಕುರಿತ ವಿಡಿಯೋ ಈಗ ವೈರಲ್ ಆಗಿದೆ.

Join Our Whatsapp Group

ಖದ್ದು ಜಿಲ್ಲಾ ರಕ್ಷಣಾಧಿಕಾರಿಗಳೇ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ರಸ್ತೆ ಬದಿ ಕಡಲೆಕಾಯಿ ಮಾರುತ್ತಿದ್ದ ವ್ಯಾಪಾರಿಗೆ ತಳ್ಳುಗಾಡಿಯಲ್ಲಿದ್ದ ವಸ್ತುವಿನಿಂದ ತಲೆಗೆ ಹಲ್ಲೆ ಮಾಡಿದ್ದು ಇದನ್ನು ಖಂಡಿಸಿ ಬೀದಿಬದಿ ವ್ಯಾಪಾರಿಗಳೆಲ್ಲ ಪೊಲೀಸ್ ಪೇದೆ ವಿರುದ್ಧ ತಿರುಗಿ ಬಿದ್ದಿದ್ದರು.

ಈ ಘಟನೆ ಗಾಂಧಿ ಬಜಾರ್‌ ನಲ್ಲಿ ವ್ಯಾಪಾರ ಮಾಡುವವರಿಗೆಲ್ಲ ಆತಂಕ ತಂದಿದೆ.